Yeneno Kanasu

ಏನೇನೋ ಕನಸು ಕಂಡಳು
ಏನೇನೋ ಬಯಸಿ ಬಂದನೋ
ಏನು ಮಾಯವೋ
ಇದು ಎಂಥ ಪ್ರೇಮವಯ್ಯಾ
ಏನು ಮಾಯವೋ
ಇದು ಎಂಥ ಪ್ರೇಮವಯ್ಯಾ

ಏನೇನೋ ಕನಸು ಕಂಡಳು
ಏನೇನೋ ಬಯಸಿ ಬಂದನೋ

ಹಾಡಿತು ಕೊಡಲೇ ಕುಹೂ ಕುಹೂ ರಾಗದಿ
ಚೈತ್ರಕೆ ಕಾಯದೆ ಕೋಗಿಲೆಯು
ಹುಣ್ಣಿಮೆ ಚಂದ್ರನ ಬಿಂಬಕೆ ಕಾಯದೆ
ಘಮ್ಮನೆ ಅರಿಳಿತು ನೈದಿಲೆಯು
ಪ್ರೀತಿಯ ಭಾವಕೆ ರೀತಿಯು ಎಲ್ಲಿದೆ
ಸಮಯವು ಕಾಯುವುದೇ

ಏನೇನೋ ಕನಸು ಕಂಡಳು
ಏನೇನೋ ಬಯಸಿ ಬಂದನೋ
ಏನು ಮಾಯವೋ
ಇದು ಎಂಥ ಪ್ರೇಮವಯ್ಯಾ
ಏನು ಮಾಯವೋ
ಇದು ಎಂಥ ಪ್ರೇಮವಯ್ಯಾ

ಬೃಂಗವ ಹಿಡಿಯುವ ಭ್ರಮೆಯಲಿ ಜೇಡವು
ಸಿಲುಕಿತು ತನ್ನದೇ ಜಾಲದಲಿ
ಸುಳ್ಳಿನ ಸುಳಿಯಲಿ ಸುಳಿ ಸುಳಿ ಸುಳಿದಾಡುತ
ನಲುಗಿತು ಪ್ರೀತಿಯ ನೋವಿನಲಿ
ಪ್ರೀತಿಯು ಕಡಲಿನ ಆಳದ ಅಂತರ
ಸುಲಭದಿ ತಿಳುಯುವುದೇ

ಏನೇನೋ ಕನಸು ಕಂಡಳು
ಏನೇನೋ ಬಯಸಿ ಬಂದನೋ
ಏನು ಮಾಯವೋ
ಇದು ಎಂಥ ಪ್ರೇಮವಯ್ಯಾ
ಏನು ಮಾಯವೋ
ಇದು ಎಂಥ ಪ್ರೇಮವಯ್ಯಾ

ಏನು ಮಾಯವೋ
ಇದು ಎಂಥ ಪ್ರೇಮವಯ್ಯಾ



Credits
Writer(s): Dodda Range Gowda, Guru Kiran
Lyrics powered by www.musixmatch.com

Link