Naanu Haado Haadu

ನಾನು ಹಾಡೋ ಹಾಡು ಈಗ ನನದಲ್ಲ

ನೀವು ಕೇಳೋ ಮುರಳಿ ನಾದ ನಿಮಗಲ್ಲ
ಅರಳೋ ಮುಂಚೇನೆ
ಬಾಡೋ ಹೂಗಳಿಗೆ
ಪ್ರಾರ್ಥನೆ ಗೀತೆಯಿದು
ನಾನು ಹಾಡೋ ಹಾಡು ಈಗ ನನದಲ್ಲ

ಹಣ್ಣಾದ ಮರವೊಂದು ಮುರಿದಾಗ
ಸಂಪೂರ್ಣ ಬಾಳೆಂಬ ಆನಂದ

ತೆನೆಯಾಗಿ ಶಿರಬಾಗಿ ಕಡಿದಾಗ
ಋಣಮುಕ್ತ ನಾನೆಂಬ ಸಂತೋಷ
ಅಭಿಮನ್ಯು ಅವಸಾನ ಆನಂದವಲ್ಲ
ಶಾಂತಲೆಯ ಬಲಿದಾನ ಸಂತೋಷವಲ್ಲ
ಗಿಣಿಯ ಬಣ್ಣ ಕಸಿಯೋ
ನದಿಯ ಓಟ ಕದಿಯೋ
ಧರೆಗೆ ಮಳೆಯ ನಿಲಿಸೋ
ನಗುವ ಒಲವ ಅಳಿಸೋ
ಕಲೆಯ ಒಡೆಯ ಮಲಗೋ ಕ್ಷಣ ಕಾಲ ನೀ

ನಾನು ಹಾಡೋ ಹಾಡು ಈಗ ನನದಲ್ಲ

ನೀವು ಕೇಳೋ ಮುರಳಿ ನಾದ ನಿಮಗಲ್ಲ
ಅರಳೋ ಮುಂಚೆನೆ ಬಾಡೋ ಹೂಗಳಿಗೆ
ಪ್ರಾರ್ಥನೆ ಗೀತೆಯಿದು
ನಾನು ಹಾಡೋ ಹಾಡು ಈಗ ನನದಲ್ಲ

ಬದುಕೆಲ್ಲ ಬಂಗಾರ ಸುರಿಬೇಡ
ಕನಸನ್ನು ಕಾಣೋದು ತಡಿಬೇಡ

ಸುರಲೋಕ ಸೋಪಾನ ಕೊಡಬೇಡ
ಅನುರಾಗದಲೇ ಮೇಲೆ ಮುನಿಬೇಡ
ಅನುಕಂಪ ನೀಡೋಕೆ ಹೃದಾಯಾನೇ ಸಾಕು
ಆಯುಷ್ಯ ಹಂಚೋಕೆ ನೀನೇನೆ ಬೇಕು
ನವಿಲ ಗರಿಯ ಮುರಿಯೋ
ಮಳೆಯ ಬಿಲ್ಲ ಮರೆಸೋ
ಶುಭದ ಮದುವೇ ಕೆಡಿಸೋ
ನಗುವ ವಲವ ಅಳಿಸೋ
ಕಲೆಯ ಒಡೆಯ ಮಲಗೋ ಕ್ಷಣ ಕಾಲ ನೀ

ನಾನು ಹಾಡೋ ಹಾಡು ಈಗ ನನದಲ್ಲ

ನೀವು ಕೇಳೋ ಮುರಳಿ ನಾದ ನಿಮಗಲ್ಲ



Credits
Writer(s): Hamsalekha
Lyrics powered by www.musixmatch.com

Link