Vishwa Vishwa (From "Vishwa")

ವಿಶ್ವಾ ವಿಶ್ವ
(ವಿಶ್ವಾ ವಿಶ್ವ)
ವಿಶ್ವಾ ವಿಶ್ವ
(ವಿಶ್ವಾ ವಿಶ್ವ)
ವಿಶ್ವಾ ವಿಶ್ವ ವಿಶ್ವಾಸವೇ ವಿಶ್ವ
ವಿಶ್ವಾ ವಿಶ್ವ ವಿಶ್ವಾಸವೇ ವಿಶ್ವ
ಅನುರಾಗವೇ ಉಚ್ವಾಸವು
ಅನುರಾಗವೇ ನಿಶ್ವಾಸವು
ನ್ಯಾಯ ಇದರ ದೇಹ
ಸತ್ಯಾ ಇದರ ದಾಹ

ವಿಶ್ವಾ ವಿಶ್ವ ವಿಶ್ವಾಸವೇ ವಿಶ್ವ
ವಿಶ್ವಾ ವಿಶ್ವ ವಿಶ್ವಾಸವೇ ವಿಶ್ವ

ಸತ್ಯಾನೇ ಉಸಿರಂತೆ ನ್ಯಾಯದೇವಿಗೆ
ಅವಳೆದೆಯ ಹಾಲಂತೆ ಕಾನೂನಿಗೆ
ಸತ್ಯಾನೇ ಉಸಿರಂತೆ ನ್ಯಾಯದೇವಿಗೆ
ಅವಳೆದೆಯ ಹಾಲಂತೆ ಕಾನೂನಿಗೆ
ಎದೆಹಾಲೇ ವಿಷವಾದರೆ ಉಳಿದೆಲ್ಲಿದೆ ಕಾನೂನಿಗೆ
ಕಾನೂನೇ ಕೊಲೆಯಾದರೆ ಕವಲಾರೋ ಅಪರಾಧಿಗೆ
ಅಪರಾಧವೇ ದೊರೆಯಾದರೆ ಭಯವೆಲ್ಲಿದೆ ಧಾನವತೆಗೆ
ನೆಲೆ ಎಲ್ಲಿದೆ ಸಜ್ಜನರಿಗೆ ಬೆಲೆ ಎಲ್ಲಿದೆ ಮಾನವತಗೆ
ನಂಬಿಕೆಗಳೇ ಉರುಳಾದರೆ ಅಂಜಿಕೆಗಳೇ ನೆರಳಾದರೆ
ನಂಬಿದವರೇ ಯಮರಾದರೆ ಬರಿ ದ್ರೋಹವೆ ಜಾಗವಾದರೆ
ದ್ರೋಹ ಉಸಿರ ಲೋಕದಲ್ಲಿ ನರನ ಶ್ವಾಸಕೋಶದಲ್ಲಿ
ದೇವನಿರುವನೆಂಬ ವಿಶ್ವಾಸ ಉಳಿಯುವುದೇ

ವಿಶ್ವಾ ವಿಶ್ವ ವಿಶ್ವಾಸವೇ ವಿಶ್ವ
ವಿಶ್ವಾ ವಿಶ್ವ ವಿಶ್ವಾಸವೇ ವಿಶ್ವ

ಜಗವೆಂದು ಸೆಣೆಸಾಡೋ ರಣರಂಗವು
ಸತ್ಯಕ್ಕೆ ಎಂದೆಂದೂ ಜಯಭೇರಿಯೋ
ಜಗವೆಂದು ಸೆಣೆಸಾಡೋ ರಣರಂಗವು
ಸತ್ಯಕ್ಕೆ ಎಂದೆಂದೂ ಜಯಭೇರಿಯೋ
ಸತ್ಯಕ್ಕೆ ಸಾವಿಲ್ಲ ಧರ್ಮಕ್ಕೆ ದಣಿವಿಲ್ಲ
ರಕ್ಕಸರ ನಿರ್ಮೂಲನ ಕದನಕ್ಕೆ ಕೊನೆಯಿಲ್ಲ
ಆಧಾತದ ಹೃದಯಕ್ಕೂ ಅನುಕಂಪದ ಅಲೆ ಇಲ್ಲಿದೆ
ನೋವುಗಳನು ಹೂವಾಗಿಸೋ ಒಲವೆಂಬುವ ಜೇನಿಲ್ಲಿದೆ
ಅನ್ಯಾಯದ ಅವತಾರಕೆ ಪ್ರತಿ ಘಳಿಗೆಯೂ ಸಾವಿಲ್ಲಿದೆ
ಧರ್ಮಗಳ ಪಡೆಯಿಲ್ಲಿದೆ ನಿಜದೈವದ ನೆರಳಿಲ್ಲಿದೆ
ಎಲ್ಲ ಇರುವ ಲೋಕದಲ್ಲಿ ಕಾಣದಿರುವ ದೇವರಲ್ಲಿ ವಿಶ್ವಾಸವೇ ಅತ್ಮಾದಾಯುಧ

ವಿಶ್ವಾ ವಿಶ್ವ ವಿಶ್ವಾಸವೇ ವಿಶ್ವ
ವಿಶ್ವಾ ವಿಶ್ವ ವಿಶ್ವಾಸವೇ ವಿಶ್ವ
ಅನುರಾಗವೇ ಉಚ್ವಾಸವು
ಅನುರಾಗವೇ ನಿಶ್ವಾಸವು
ನ್ಯಾಯ ಇದರ ದೇಹ
ಸತ್ಯಾ ಇದರ ದಾಹ

ವಿಶ್ವಾ ವಿಶ್ವ ವಿಶ್ವಾಸವೇ ವಿಶ್ವ
ವಿಶ್ವಾ ವಿಶ್ವ ವಿಶ್ವಾಸವೇ ವಿಶ್ವ



Credits
Writer(s): Hamsalekha
Lyrics powered by www.musixmatch.com

Link