Naguvaaga Hoovanthe

ನಗುವಾಗ ಹೂವಂತೆ ನಗುವೇ
ಸಿಡಿದಾಗ ಹುಲಿಯಂತೆ ಬರುವೇ
ನಾ ಸ್ನೇಹಕೆ ಸೋಲುವೆನು
ನಾ ಪ್ರೇಮಕೆ ಮಣಿಯುವೆನು
ನಾ ಸ್ನೇಹಕೆ ಸೋಲುವೆನು
ನಾ ಪ್ರೇಮಕೆ ಮಣಿಯುವೆನು
ಅನ್ಯಾಯ ಕಂಡು ಬಂದಾಗ
ಸಿಡಿಲಾಗಿ ನಾ ನಿಲ್ಲುವೇ

ನಗುವಾಗ ಹೂವಂತೆ ನಗುವೇ
ಸಿಡಿದಾಗ ಹುಲಿಯಂತೆ ಬರುವೇ

ಬಾನಲ್ಲಿ ಬಾನಾಡಿ ನಾನಾಗಿ
ಹಾರಾಡುವ ಆಸೆ ಹಗಲೆಲ್ಲ
ನೀರಲ್ಲಿ ಬಂಗಾರ ಮೀನಾಗಿ
ಈಜಾಡುವ ಆಸೆ ಇರುಳೆಲ್ಲ
ಸೌಂದರ್ಯ ನೋಡುತ
ಸಂಗೀತ ಹಾಡುತ
ಕಣ್ಣ್ಸನ್ನೆ ಮಾಡುವ
ಸಂತೋಷ ನೀಡುವ
ನೂರಾಸೆಯು ಕಾಡಿದೆ

ನಗುವಾಗ ಹೂವಂತೆ ನಗುವೇ
ಸಿಡಿದಾಗ ಹುಲಿಯಂತೆ ಬರುವೇ
ನಾ ಸ್ನೇಹಕೆ ಸೋಲುವೆನು
ನಾ ಪ್ರೇಮಕೆ ಮಣಿಯುವೆನು
ನಾ ಸ್ನೇಹಕೆ ಸೋಲುವೆನು
ನಾ ಪ್ರೇಮಕೆ ಮಣಿಯುವೆನು
ಅನ್ಯಾಯ ಕಂಡು ಬಂದಾಗ
ಸಿಡಿಲಾಗಿ ನಾ ನಿಲ್ಲುವೇ

ಮಾತಲ್ಲಿ ವೈರಾಗ್ಯ ಸರಿಯಲ್ಲ
ಇರುವಾಸೆ ಹೇಳೋದು ತಪ್ಪಲ್ಲ
ಒಲವಿಂದ ಬಂದಾಗ ಹೆಣ್ಣನ್ನು
ದೂರಕ್ಕೆ ನೂಕೋನು ಗಂಡಲ್ಲ
ತಾನಾಗಿ ಬಂದಿದೆ
ನನ್ನನ್ನು ಕಾಡಿದೆ
ಆನಂದ ನೀಡುವ
ಹೊಸ ದಾರಿ ತೋರಿದೆ
ಮೈ ತುಂಬಿದ ಯವ್ವನ

ನಗುವಾಗ ಹೂವಂತೆ ನಗುವೇ
ಸಿಡಿದಾಗ ಹುಲಿಯಂತೆ ಬರುವೇ
ನಾ ಸ್ನೇಹಕೆ ಸೋಲುವೆನು
ನಾ ಪ್ರೇಮಕೆ ಮಣಿಯುವೆನು
ನಾ ಸ್ನೇಹಕೆ ಸೋಲುವೆನು
ನಾ ಪ್ರೇಮಕೆ ಮಣಿಯುವೆನು
ಅನ್ಯಾಯ ಕಂಡು ಬಂದಾಗ
ಸಿಡಿಲಾಗಿ ನಾ ನಿಲ್ಲುವೇ



Credits
Writer(s): Chi. Udayashankar, Vijayanand
Lyrics powered by www.musixmatch.com

Link