Ee Santhelu Siguva

ಈ ಸಂತೇಲು ಸಿಗುವ ದೇವನೇ
ಸರ್ವಗುಣ ಸಂಪನ್ನನೇ ನನಗೆ ಬೇಕು ನೀನೇ
ಜೀವನವನು ಪ್ರೀತಿಸುವುದೇ ನಿನ್ನಯ ಕಲೆಯೇನು
ನಿನ್ನಲಿ ಇರೋ ಒಳ್ಳೆಯತನ ಅನುಸರಿಸುವೆನು
ಎಲ್ಲಾನು ಬದಿಗಿರಿಸು ನನ್ನನ್ನೇ ಪರಿಗಣಿಸು

ಈ ಸಂತೇಲು ಸಿಗುವ ದೇವನೇ
ಸರ್ವಗುಣ ಸಂಪನ್ನನೇ ನನಗೆ ಬೇಕು ನೀನೇ

ನೀ ಅದ್ಭುತ ಸ್ನೇಹಿತ ಎಂದರೆ ಸಾಕಾ
ನಿನ್ನಯ ಅನುರಾಗ ಸಾಂಕ್ರಾಮಿಕ
ಈ ಸ್ವಪ್ನವ ಮುಟ್ಟದೇ ನಂಬಲಿ ಹೇಗೆ
ಹಿಗ್ಗನು ಹೇಳಲಿ ಯಾರಿಗೆ

ಎಲ್ಲವು ನೀನೇ ಹೇಳಿದರೆ ಹೇಗೆ ನನ್ನನು ಆಲಿಸು
ಜೀವದ ಜಂಟಿ ಖಾತೆಯಲ್ಲಿ ಬೇಗ ನನ್ನನು ಸೇರಿಸು
ಪ್ರೀತಿಯಲ್ಲಿ ಬಿದ್ದಮೇಲೆ ಎಂದಿಗಿಂತ ಚೆಂದ ನೀನು
ನನ್ನನ್ನೇ ಮರೆತರು ನಾ ನಿನ್ನನ್ನು ಮರೆಯುವೆನೇ

ನಾ ಬಯಸಿದ ಸೊಗಸುಗಾರ ನೀ
ರೋಮಾಂಚಕ ಕನಸಿನ ಜಾಹಿರಾತು ನೀನೇ
ಜೀವನವನು ಪ್ರೀತಿಸುವುದೆ ನಿನ್ನಯ ಕಲೆಯೇನು
ನಿನ್ನಲಿ ಇರೋ ಒಳ್ಳೆಯತನ ಅನುಸರಿಸುವೆನು
ಎಲ್ಲಾನು ಬದಿಗಿರಿಸು ನನ್ನನ್ನೇ ಪರಿಗಣಿಸು



Credits
Writer(s): Jayanth Kaikini, B. Ajaneesh Loknath
Lyrics powered by www.musixmatch.com

Link