Thaayi Thaayi

ಜೋ ಜೋ ನನ್ನ ಮುದ್ದಿನ ಕಂದ ಗುಮ್ಮನು ಬಂದ
ಜೋ ಜೋ ನನ್ನ ಚಿನ್ನದ ಕಂದ ಚಂದಿರ ಬಂದ

ತಾಯಿ ತಾಯಿ ಲಾಲಿ ಹಾಡೋ ಭೂಮಿ ತಾಯಿಗೆ
ತಾಯಿ ತಾಯಿ ಲಾಲಿ ಹಾಡೋ ಹೆತ್ತ ತಾಯಿಗೆ
ಹೊರುವಳು ಭೂಮಿ ಭಾರ
ಹೆರುವಳು ತಾಯಿ ನೋವ
ತ್ಯಾಗಮಯಿ ಈ ತಾಯಿ

ತಾಯಿ ತಾಯಿ ಲಾಲಿ ಹಾಡೋ ಭೂಮಿ ತಾಯಿಗೆ
ಲಾಲಿ ಹಾಡೋ ಹೆತ್ತ ತಾಯಿಗೆ

ಕರುಳ ಕುಡಿಯ ಸುಖ ಕೋರಿ
ಗೂಡಿನಿಂದ ಹೊರ ಹಾರಿ
ಅಲೆವಳು ದಣಿವಳು
ಅನುಕ್ಷಣಾ ಮಿಡಿವಳು

ಕಾಲಕೂಟವನ್ನು ಸಹಿಸಿ
ಕಾಮಕೂಟವನ್ನು ಕ್ಷಮಿಸಿ
ಜಗವನೆ ಮಗುವಿನ ತೆರದಲಿ ತಿಳಿವಳು

ಅಳುವಳು ಅಬಲೆಯು ಎಂದೂ
ಉಳಿವಳು ಮಗುವಿಗೆ ಎಂದೂ
ಪ್ರೇಮಮಯಿ ತಾಯಿ

ತಾಯಿ ತಾಯಿ ಲಾಲಿ ಹಾಡೋ ಭೂಮಿ ತಾಯಿಗೆ
ಲಾಲಿ ಹಾಡೋ ಹೆತ್ತ ತಾಯಿಗೆ

ಗರ್ಭವೇ ತಾಯಿಯ ಸ್ವರ್ಗ
ಎಂದಿತು ದೈವ ನಿಸರ್ಗ

ಮೊಲೆಯುಣಿಸುವ ಸ್ತ್ರೀ ಧರ್ಮ
ವಹಿಸಿದಾ ತಾಯಿಗೆ ಬ್ರಹ್ಮ
ತೊರೆವಳು ಸುಖ ಸಹವಾಸ
ಇರುವಳು ದಿನ ಉಪವಾಸ
ವೇದಮಯಿ ಈ ತಾಯಿ

ತಾಯಿ ತಾಯಿ ಲಾಲಿ ಹಾಡೋ ಭೂಮಿ ತಾಯಿಗೆ
ಲಾಲಿ ಹಾಡೋ ಹೆತ್ತ ತಾಯಿಗೆ

ಯೌವ್ವನಾ ಜೊತೆ ಬಡತನ
ಹಂಗಿಸೋ ಆ ಸಿರಿತನ
ಈ ಉದರಕಾಗಿ ಈ ಆಧಾರಕೆ ಕಹಿ ಚುಂಬನ
ಈ ಬದುಕಾಗಿ ಈ ಮೌನದ ಆಕ್ರಂದನ

ಹೊರುವಳು ಭೂಮಿ ಭಾರ
ಹೆರುವಳು ತಾಯಿ ನೋವ
ತ್ಯಾಗಮಯಿ ತಾಯಿ
ತಾಯಿ ತಾಯಿ ಲಾಲಿ ಹಾಡೋ ಭೂಮಿ ತಾಯಿಗೆ
ತಾಯಿ ತಾಯಿ ಲಾಲಿ ಹಾಡೋ ಹೆತ್ತ ತಾಯಿಗೆ



Credits
Writer(s): Hamsalekha
Lyrics powered by www.musixmatch.com

Link