Neenene Neenene

ನೀನೇನೆ ನೀನೇನೆ ನನಗೆಲ್ಲಾ ನೀನೇನೆ
ಈ ಪ್ರೀತಿ ಭಾಷೆಗೆ ಅರ್ಥ ನೀನೇನೆ
ನಗುವಲ್ಲೇ ಸಮ್ಮತಿ ನೀ ಕೊಟ್ಟ ಕೂಡಲೇ
ಕಂಡಿದೆ ಜಗವೆಲ್ಲ ಅಂದ ಚಂದಾನೇ

ನಾ ಮುಡಿದು ಮಲ್ಲಿಗೆ ಹೂವಿನ ಮಾಲೆ
ನಿನಗಾಗಿ ಕಾಯುವೆ ಹೊಸಿಲ್ಲಲ್ಲೇ
ನೀ ಬಂದು ನನನ್ನು ಸೇರಿದ ಕೂಡಲೇ
ಮರೆಯುವೆ ನಾನು ಈ ಜಗವನ್ನೇ
ನೀನೇನೆ ನೀನೇನೆ ನನಗೆಲ್ಲಾ ನೀನೇನೆ
ಈ ಪ್ರೀತಿ ಭಾಷೆಗೆ ಅರ್ಥ ನೀನೇನೆ

ಹಗಲಲಿ ಇರುಳಲಿ ಕನಸಲಿ ನನಸಲಿ
ಕಾಣುವೆ ನಿನ್ನನೇ ನಾನೇನು ಮಾಡಲಿ
ನಡೆಯುವೆ ಜೊತೆಯಲಿ ಬಿಸಿಲಲಿ ಮಳೆಯಲಿ
ಹಿಡಿಯುವೆ ಕೈಯ್ಯನು ಆಕಾಶ ಬೀಳಲಿ
ಹಾಲು ಜೇನಿನಂತ ರಾಜ ರಾಣಿ ಹಾಗೆ ನಾನು ನನಗೆ ನೀನು
ನನ್ನೀ ಹೃದಯದ ಪುಟ್ಟ ಗುಡಿಯಲೇ ನಿನ್ನ ಇರಿಸುವೆನು

ಕಚಗುಳಿ ಮನದಲಿ ಪ್ರತಿಕ್ಷಣ ಖುಷಿಯಲಿ
ಸಡಗರ ಸುಮಧುರ ಪ್ರೀತಿ ಸಾಗಲಿ
ದಿನಗಳು ಸವೆಯಲಿ ಅನುಕ್ಷಣ ಸೊಬಗಲಿ
ನಗುವ ಹೂ ಚೆಲ್ಲುವೆ ನಿನ್ನ ದಾರೀಲಿ
ನಿನ್ನ ನೆನಪಿನ ಒಲವ ಮಳೆಯಲಿ ನಾನು ನೆನೆಯುವೆನು
ನಿನ್ನ ಚೆಲುವಿನ ಪ್ರೀತಿ ಬೆಳಕಲಿ ನನ್ನೇ ಮರೆಯುವೆನು

ನೀನೇನೆ ನೀನೇನೆ ನನಗೆಲ್ಲಾ ನೀನೇನೆ
ಈ ಪ್ರೀತಿ ಭಾಷೆಗೆ ಅರ್ಥ ನೀನೇನೆ
ನಗುವಲ್ಲೇ ಸಮ್ಮತಿ ನೀ ಕೊಟ್ಟ ಕೂಡಲೇ
ಕಂಡಿದೆ ಜಗವೆಲ್ಲ ಅಂದ ಚಂದಾನೇ
ನಾ ಮುಡಿದು ಮಲ್ಲಿಗೆ ಹೂವಿನ ಮಾಲೆ
ನಿನಗಾಗಿ ಕಾಯುವೆ ಹೊಸಿಲ್ಲಲ್ಲೇ
ನೀ ಬಂದು ನನನ್ನು ಸೇರಿದ ಕೂಡಲೇ
ಮರೆಯುವೆ ನಾನು ಈ ಜಗವನ್ನೇ
ನೀನೇನೆ
ನೀನೇನೆ
ನನಗೆಲ್ಲಾ
ನೀನೇನೆ
ಈ ಪ್ರೀತಿ
ಭಾಷೆಗೆ
ಅರ್ಥ
ನೀನೇನೆ
ನೀ ನೇ ನೆ
ನೀನೇನೆ
ನೀನೆ ನೀನೇನೆ
ನೀನೇನೆ
ನೀನೇನೆ



Credits
Writer(s): Adil Nadaf, Krish
Lyrics powered by www.musixmatch.com

Link