Summane Summane

ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣ ತಿಂತಾನೆ, ಪ್ರೀತೀಲಿ ಗೆಲ್ತಾನೆ

ನಖರಾ ನಖರಾ ಶಾನೆ ನಖರಾ ನಂಗೂ ಇಷ್ಟಾನೇ
ನಾನು ಸೀರೆ ನೆರಿಗೆ ಹಾಕುವ ಘಳಿಗೆ ಬರ್ತಾನೆ ಬಳಿಗೆ, ಆಮೇಲೆ ಅಮ್ಮಮ್ಮ
ಯಾವ ಸೀಮೆ ಹುಡುಗ ತುಂಟಾಟ ಮಾಡದೆ ನಿದ್ದೇನೆ ಬರದೇ ಅಬ್ಬಬ್ಬಬ್ಬಬ್ಬಬ್ಬ

ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣ ತಿಂತಾನೆ, ಪ್ರೀತೀಲಿ ಗೆಲ್ತಾನೆ

ಅಂಗಾಲಿಗೂ ಅಂಗೈಯಿಗೂ ಗೋರಂಟಿಯ ಹಾಕುವ
ಯಾಮಾರಿಸಿ ಕೈ ಸೋಕಿಸಿ ಕಳ್ಳಾಟವ ಆಡುವ
ನಿನ ಕಣ್ಣಲಿ ಧೂಳು ಇದೆ ಎಂದು ನೆಪ ಹೇಳುತಾ
ನನ್ನ ಕಣ್ಣಲಿ ಕಣ್ಣಿಟ್ಟನೋ ತುಟಿಯಂಚನು ತಾಕುತಾ
ನಾನು ನೋವು ಅಂದರೆ ಕಣ್ಣೀರು ಹಾಕುವ, ನೋವೆಲ್ಲಾ ನೂಕುವ, ಧೈರ್ಯನ ಹೇಳುವ
ಮಾತು ಮಾತು ಸರಸ ಒಂಚೂರು ವಿರಸ ಇಲ್ಲದ ಅರಸ ಆಳ್ತಾನೆ ಮನಸ

ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣ ತಿಂತಾನೆ, ಪ್ರೀತೀಲಿ ಗೆಲ್ತಾನೆ

ಮುಂಜಾನೆಯ ಮೊಗ್ಗೆಲ್ಲವ ಸೂರ್ಯಾನೇ ಹೂ ಮಾಡುವ
ಈ ಹುಡುಗಿಯ ಹೆಣ್ಣಾಗಿಸೋ ಜಾದೂಗಾರ ಇವ
ಮುಸ್ಸಂಜೆಯ ದೀಪ ಇವ ಮನೆ ಮನ ಬೆಳಗುವ
ಸದ್ದಿಲ್ಲದ ಗುಡುಗು ಇವ ನನ್ನೊಳಗೆ ಮಳೆಯಾಗುವ
ಪ್ರೀತಿ ಅಂದ್ರೆ ನಂಬಿಕೆ ಹೃದಯಾನೇ ಕಾಣಿಕೆ ಅನ್ನೋದು ವಾಡಿಕೆ ಅದಕಿವನೇ ಹೋಲಿಕೆ
ಏಳು ಏಳು ಜನುಮ ಇವನಿಂದಾನೆಯಮ್ಮ ಆಗುತ್ತಾ ಬಾಳಮ್ಮ ಅಂದೋನ್ನುಆ ಬ್ರಹ್ಮ

ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣ ತಿಂತಾನೆ, ಪ್ರೀತೀಲಿ ಗೆಲ್ತಾನೆ



Credits
Writer(s): Nagendra Prasad, V Harikrishna
Lyrics powered by www.musixmatch.com

Link