Thanmayaladenu (Reprise Version)

ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
ನಿನ್ನಲ್ಲಿ ಜೀವವನ್ನು ಅಡವಿಟ್ಟು ಬಂದೆ ನಾನು
ಕಣ್ಮುಚ್ಚಿಯೇ ನಾನೋದಲೇ ಪುಟವೊಂದನು, ಅರಿಯುವ ಮುನ್ನವೇ
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ

ತಪ್ಪು ತಿಳಿಯಬೇಡ ನೀನು ಕನಸಿನಲ್ಲಿ ಕಂಡರೆ
ಬೇರೆ ಏನು ಹೇಳುವಾಗ ಕಣ್ಣು ತುಂಬಿ ಬಂದರೆ
ಈ ಮನಸಿಗೆ ಭಾಸವು, ಇಲ್ಲಿ ನೀನು ನನ್ನ ಕೂಗಿದಂತೆ
ಸಣ್ಣ ಸಲ್ಲಾಪವನ್ನು ಒಂಟಿಯಾಗಿ ನಡೆಸುತ್ತ ನಾನಿಂತೆ
ಮನಸಲ್ಲಿ ಅಂದ ಮಾತು ತಡವಾಗಿ ಕೇಳಿತೇನು
ಗೊತ್ತಿಲ್ಲದೇ ನಾಗೀಚಲೇ ಹೆಸರೊಂದನು ಅಳಿಸುವ ಮುನ್ನವೇ

ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ

ಪ್ರತಿಸಲ ಬಾಗಿಲ ಸದ್ದಿಗೆ ಎದೆಯಲಿ ಸ್ಪಂದನ
ತೆರೆದರೆ ಬೀಸುವ ಗಾಳಿಯೂ ಹೇಳಿದೆ ಸಾಂತ್ವನ
ನನ್ನ ವಿರಹವೂ ನಿನ್ನಿಂದ ಇನ್ನು ಚೆಂದ
ವಿವರಿಸಲಾರೆ ಎಲ್ಲಾ ನಾ ದೂರದಿಂದ
ನೆನಪನ್ನೋ ರಾಶಿಹಾಕಿ ಎಣಿಸುತ್ತ ಕೂರಲೇನು
ಕನ್ನಡಿಯಲ್ಲಿ ನಾ ಹುಡುಕಲೇ ನಗುವೊಂದನು ಉರಿಸುವ ಮುನ್ನವೇ

ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ



Credits
Writer(s): Jayanth Kaikini, V. Harikrishna
Lyrics powered by www.musixmatch.com

Link