Neenire Saniha (From "Kirik Party")

ಒಂಥರಾ ನೀನೆ ರುವಾರಿ ಹೊಂಗನಸಿಗೆ
ಸಾಗಿದೆ ನಿನ್ನ ಸವಾರಿ ಈ ಮನಸಿಗೆ
ಅರಿಯದೇನೆ ನಿನ್ನಲೇ ಒಂದಾಗೋ ಸೂಚನೆ
ಅರೆರೆರೆ ನಾಚಿ ಹೂವಾಗಿ ಶಿಲೆಯಂತಾದೆನೆ

ಮುಗಿಲೇರಿ ನಿಂತ ಸೂರ್ಯ
ಕಂಡರೆ ಸುಡುವಂಥ ಭಾವ
ಮಳೆ ಬಿಲ್ಲಿಗೆ ರಂಗನು ಉಡಿಸಿಲ್ಲವೇ
ನಗುವ ಚಂದಿರನಲ್ಲಿ
ಕಲೆಯ ಕಾಣೋರೆ ಇಲ್ಲಿ
ಬೆಳದಿಂಗಳ ರಂಗಾವಲಿ ಬಲ್ಲರೇ
ನಿನಗೆ ಹೇಳಲೆಂದು ಮಾತೊಂದೇ ಒಂದು ನನ್ನಲ್ಲೇ ಉಳಿದಂತೆ
ರವಿಯ ದಾರಿ ಕಾಯೋ ಮಂದಾರವೇ ನನ್ನಾಸೆಯ ಅರಿತಂತೆ

ನೀನಿರೆ ಸನಿಹ ನೀನಿರೆ
ನಾಳೆಯ ಪರಿವೆ ಇಲ್ಲವೇ
ನೀನಿರೆ ಸನಿಹ ನೀನಿರೆ
ಹೇಳದ ಮಾತು ನೂರಿವೆ
ಹರಿವ ಝರಿಯಂತೆ ಜಾರೋ ಈ ನಿನ್ನ ಜೀವಕೆ
ಶರಧಿ ತೆರೆಯಂತೆ ನೀ ಬಂದರೇನೇ ಹೋಲಿಕೆ

ಓ ಮನಸೇ
ನೀ ಬಹುಶ ಈ ಮನಸ ರಂಗೇರಿಸೋ ಯೋಜನೆಯೇ
ನಾಚಿರುವೆ ನವಿಲಂತೆ ಮರುಳಾಗಿ ಹೋದೆನೇ
ಮರೆತು ಮೈ ಮರೆತು
ನಸು ನಗುವೇ ಯಾರ ಪರಿವಿಲ್ಲದೆ ಈ ನಡುವೆಯೇ
ಅರೆರೆರೆ ನಾಚಿ ಹೂವಾಗಿ ಶಿಲೆಯಂತಾದೆನೆ

ಮುಗಿಲೇರಿ ನಿಂತ ಸೂರ್ಯ
ಕಂಡರೆ ಸುಡುವಂಥ ಭಾವ
ಮಳೆ ಬಿಲ್ಲಿಗೆ ರಂಗನು ಉಡಿಸಿಲ್ಲವೇ
ನಗುವ ಚಂದಿರನಲ್ಲಿ
ಕಲೆಯ ಕಾಣೋರೆ ಇಲ್ಲಿ
ಬೆಳದಿಂಗಳ ರಂಗಾವಲಿ ಬಲ್ಲರೇ
ನಿನಗೆ ಹೇಳಲೆಂದು ಮಾತೊಂದೇ ಒಂದು ನನ್ನಲ್ಲೇ ಉಳಿದಂತೆ
ರವಿಯ ದಾರಿ ಕಾಯೋ ಮಂದಾರವೇ ನನ್ನಾಸೆಯ ಅರಿತಂತೆ

ನೀನಿರೆ ಸನಿಹ ನೀನಿರೆ
ನಾಳೆಯ ಪರಿವೆ ಇಲ್ಲವೇ
ನೀನಿರೆ ಸನಿಹ ನೀನಿರೆ
ಹೇಳದ ಮಾತು ನೂರಿವೆ

(ನೀನಿರೆ ಸನಿಹ ನೀನಿರೆ
ನಾಳೆಯ ಪರಿವೆ ಇಲ್ಲವೇ
ನೀನಿರೆ ಸನಿಹ ನೀನಿರೆ
ಹೇಳದ ಮಾತು ನೂರಿವೆ)

ಹರಿವ ಝರಿಯಂತೆ ಜಾರೋ ಈ ನಿನ್ನ ಜೀವಕೆ
ಶರಧಿ ತೆರೆಯಂತೆ ನೀ ಬಂದರೇನೆ ಹೋಲಿಕೆ



Credits
Writer(s): Kiran Kaverappa, Ajaneesh Loknath B
Lyrics powered by www.musixmatch.com

Link