Naada Naada Premada Naada (From "Andamaan")

ನಾದ ನಾದ ಪ್ರೇಮದ ನಾದ
ನಾದ ನಾದ ಪ್ರೇಮದ ನಾದ
ಜೀವನ ವೀಣಾ ತಂತಿಯಲಿ
ಸಾಗರದ ಸಂಗಮದ ಯವ್ವನದ ಸಂಭ್ರಮದ
ತನ ನನನ ತನುವಲಿ
ನಾದ ನಾದ ಪ್ರೇಮದ ನಾದ

ಕಡಲ ಸೆರೋ ನದಿಗೆ ದಾರಿ ತೋರಿದವರು ಯಾರು
ಪುಷ್ಪ ರಾಗ ರತಿಗೆ ಹಾಡು ಕಲಿಸಿದವರು ಯಾರು
ಪ್ರಣಯ ಭಾಷೆಯ ಅರಿತುಕೊಳ್ಳವ ಕಣ್ಣಿಗ್ಯಾರು ಗುರು
ಪ್ರೀತಿ ಅರಿತವರು

ನಾದ ನಾದ ಪ್ರೇಮದ ನಾದ
ಜೀವನ ವೀಣಾ ತಂತಿಯಲಿ
ಸಾಗರದ ಸಂಗಮದ
ಯವ್ವನದ ಸಂಭ್ರಮದ
ತನ ನನನ ತನುವಲಿ
ನಾದ ನಾದ ಪ್ರೇಮದ ನಾದ

ಪ್ರಣಯ ಗಾಳಿ ಬೀಸಿ ಆಸೆಗಣ್ಣು ತೆರೆದು
ನಿದಿರೆ ಭಂಗವಾಗಿ ಈ ಬಯಕೆ ಲಜ್ಜೆ ತೊರೆದು
ತನನ್ನರಿಯದೆ ಕುಸುಮ ಸೇರುವ ದುಂಬಿಗಳ ಪಾಡು
ನಮ್ಮ ಈ ಹಾಡು

ನಾದ ನಾದ ಪ್ರೇಮದ ನಾದ
ಜೀವದ ವೀಣಾ ತಂತಿಯಲಿ
ಸಾಗರದ ಸಂಗಮದ
ಯವ್ವನದ ಸಂಭ್ರಮದ
ತನ ನನನ ತನುವಲಿ
ನಾದ ನಾದ ಪ್ರೇಮದ ನಾದ

ಕೋಟಿ ರಾತ್ರಿ ಬರಲಿ ಈ ಮೊದಲ ರಾತ್ರಿ ಮಧುರ
ನೆನಪಿನಾಳದಲ್ಲಿ ಈ ಮಧುರ ಮೈತ್ರಿ ಅಮರ
ಪ್ರಥಮ ಚುಂಬನ ಪ್ರಣಯ ಕಂಪನ ತಂದ ಈ ಇರುಳು
ಬಾಲ ಜೇನಿರುಳು

ನಾದ ನಾದ ಪ್ರೇಮದ ನಾದ
ಜೀವದ ವೀಣಾ ತಂತಿಯಲಿ
ಸಾಗರದ ಸಂಗಮದ
ಯವ್ವನದ ಸಂಭ್ರಮದ
ತನ ನನನ ತನುವಲಿ
ನಾದ ನಾದ ಪ್ರೇಮದ ನಾದ



Credits
Writer(s): Hamsalekha
Lyrics powered by www.musixmatch.com

Link