Aa Rathiye Dharegilidanthe

ಆ ರತಿಯೇ ಧರೆಗಿಳಿದಂತೆ
ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂ ಬಾಣವಾಯಿತೋ, ಎನಿಸುತಿದೆ
ಆ ರತಿಯೇ ಧರೆಗಿಳಿದಂತೆ
ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂ ಬಾಣವಾಯಿತೋ, ಎನಿಸುತಿದೆ

ಮಾಮರ ತೂಗುತ, ಚಾಮರ ಹಾಕುತ, ಪರಿಮಳ ಎಲ್ಲೆಡೆ ಚೆಲ್ಲುತಿರೇ
ಗಗನದ ಅಂಚಲಿ, ರಂಗನು ಚೆಲ್ಲುತ, ಸಂಜೆಯು ನಾಟ್ಯವ ಆಡುತಿರೇ
ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ
ಕೋಗಿಲೆಯೂ ನಲಿಯುತಿರೆ

ಆ ರತಿಯೇ ಧರೆಗಿಳಿದಂತೆ
ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂ ಬಾಣವಾಯಿತೋ, ಎನಿಸುತಿದೆ

ಪ್ರೇಮದ ಭಾವಕೆ, ಪ್ರೀತಿಯ ರಾಗಕೆ, ಮೌನವೆ ಗೀತೆಯ ಹಾಡುತಿರೇ
ಸರಸದ ಸ್ನೇಹಕೆ, ಒಲವಿನ ಕಾಣಿಕೆ, ನೀಡಲು ಅಧರವು ಅರಳುತಿರೇ
ಎಂದಿಗೂ ಹೀಗೆ ಬಾಳುವಾಸೆ ತುಂಬಿ ಬಂದು
ಪ್ರೇಮಿಗಳೂ ನಲಿಯುತಿರೆ
ಪ್ರೇಮಿಗಳೂ ನಲಿಯುತಿರೆ

ಆ ರತಿಯೇ ಧರೆಗಿಳಿದಂತೆ
ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
ಹೂ ಬಾಣವಾಯಿತೋ ಎನಿಸುತಿದೆ
ಹೂ ಬಾಣವಾಯಿತೋ ಎನಿಸುತಿದೆ
ಹೂ ಬಾಣವಾಯಿತೋ ಎನಿಸುತಿದೆ
ಹೂ ಬಾಣವಾಯಿತೋ ಎನಿಸುತಿದೆ



Credits
Writer(s): Upendra Kumar, Chi Udayashanker
Lyrics powered by www.musixmatch.com

Link