Neeralli Sanna (Male Version)

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ
ಇಲ್ಲೊಂದು ಚೂರು, ಅಲ್ಲೊಂದು ಚೂರು ಒಂದಾಗಬೇಕು ಬೇಗ
ತುಸು ದೂರ ಸುಮ್ಮನೆ ಜೊತೆಯಲ್ಲಿ ಬಂದೆಯಾ?
ನಡುವೆಲ್ಲೋ ಮೆಲ್ಲಗೆ ಮಾಯವಾದೆಯಾ?

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ
ಇಲ್ಲೊಂದು ಚೂರು, ಅಲ್ಲೊಂದು ಚೂರು ಒಂದಾಗಬೇಕು ಬೇಗ

ಇದ್ದಲ್ಲೇ ಆಲಿಸಬಲ್ಲೆ ನಿನ್ನೆಲ್ಲ ಪಿಸುಮಾತು
ನನ್ನಲ್ಲಿ ನೀನಿರುವಾಗ ಇನ್ನೇಕೆ ರುಜುವಾತು?
ನೆನಪಿನಲ್ಲೇ ನೀನೀಗ ಎಂದಿಗಿಂತ ಸನಿಹ
ಅಳಿಸಲಾರೆ ನಾನೆಂದೂ ಮನದ ಗೋಡೆ ಬರಹ

ಸಹಿಯಾದ ಮೇಲೆ ಸಹಗೀತೆಯೊಂದು ಮರೆಯಾಯಿತೇಕೆ ನೋಡು
ಇಲ್ಲೊಂದು ಸಾಲು, ಅಲ್ಲೊಂದು ಸಾಲು ಬೆರೆತಾಗಲೇನೇ ಹಾಡು

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ
ಇಲ್ಲೊಂದು ಚೂರು, ಅಲ್ಲೊಂದು ಚೂರು, ಒಂದಾಗಬೇಕು ಬೇಗ

ದಾರಿಲಿ ಹೂ-ಗಿಡ ಒಂದೂ ಕಟ್ಟಿಲ್ಲ ಹೂಮಾಲೆ
ಕಣ್ಣಲ್ಲಿ ಕಣ್ಣಿಡು ನೀನು, ಮತ್ತೆಲ್ಲ ಆಮೇಲೆ
ಕಾಣಬಲ್ಲೆ ಕನಸಲ್ಲೂ ನಿನ್ನ ಹೆಜ್ಜೆ ಗುರುತು
ಕೇಳಬೇಡ ಇನ್ನೇನೂ ನೀನು ನನ್ನ ಕುರಿತು

ಎದೆಯಾಳದಿಂದ ಮುದುಮೌನವೊಂದು ಕರೆವಾಗ ಜಂಟಿಯಾಗಿ
ಇಲ್ಲೊಂದು ಜೀವ, ಅಲ್ಲೊಂದು ಜೀವ ಇರಬೇಕೇ ಒಂಟಿಯಾಗಿ?

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ
ಇಲ್ಲೊಂದು ಚೂರು, ಅಲ್ಲೊಂದು ಚೂರು, ಒಂದಾಗಬೇಕು ಬೇಗ

Credits
Writer(s): Jayant Kaikini, V. Harikrishna
Lyrics powered by www.musixmatch.com

Link