Modala Maleyanthe - Female Version

ಮೊದಲ ಮಳಯಂತೆ ಎದೆಗೆ ಇಳಿದೆ ಮೆಲ್ಲಗೆ
ಮೊದಲ ಕನಸಂತೆ ಸುಳಿದೆ ಮುಗಿಲ ಮಲ್ಲಿಗೆ
ಚಾಚಿದ ಕೈಗೆ ಆಕಾಶವೇ ತಾಗಿದೆ
ಗೀಚಿದ ಹಾಗೆ ಮಳೆಬಿಲ್ಲೆ ಮೈಗಂಟಿದೆ
ಹೊಸ ಸಂವತ್ಸರ ಹೊಸ ಮನ್ವಂತರ (ಹೊಸ ಸಂವತ್ಸರ ಹೊಸ ಮನ್ವಂತರ)
ಶುರುವಾಗಿದೆ ಆಗಿದೆ ಈಗ (ಶುರುವಾಗಿದೆ ಆಗಿದೆ ಈಗ)
ಮೊದಲ ಮಳೆಯಂತೆ ಎದೆಗೆ ಇಳಿದೆ ಮೆಲ್ಲಗೆ

ನೀ ನನಗೆ ಸಿಗುವ ಮುನ್ನ
ಎಲ್ಲೆಲ್ಲೂ ಬರಿದೆ ಮೌನ
ಚಿಮ್ಮೋತರ ಒಮ್ಮೆ ಕೋಟಿ ಸ್ವರ
ಬಾಳಲ್ಲಿ ನೀ ನಿಂತೆ ಬಾನೆತ್ತರ
ಕಣ್ಮುಚ್ಚಿ ಕಣ್ಬಿಟ್ಟರೆ
ಬದಲಾಗಿದೆ ಈ ಧರೆ
ಹೊಸ ಸಂವತ್ಸರ ಹೊಸ ಮನ್ವಂತರ (ಹೊಸ ಸಂವತ್ಸರ ಹೊಸ ಮನ್ವಂತರ)
ಶುರುವಾಗಿದೆ ಆಗಿದೆ ಈಗ (ಶುರುವಾಗಿದೆ ಆಗಿದೆ ಈಗ)

ಒಂದೊಂದು ಖುಷಿಗೂ ಇಂದು
ನಾನಿಡುವ ಹೆಸರೇ ನಿಂದು
ಏಕಾಂತಕೆ ಅಂತ್ಯ ನೀ ಹಾಡಿದೆ
ಆ ಸ್ವರ್ಗಕೆ ನನ್ನ ನೀ ದೂಡಿದೆ
ಕಣ್ಮುಂದೆ ನೀನಿದ್ದರೆ
ಈ ಲೋಕಕೆ ನಾ ದೊರೆ
ಹೊಸ ಸಂವತ್ಸರ ಹೊಸ ಮನ್ವಂತರ
ಶುರುವಾಗಿದೆ ಆಗಿದೆ ಈಗ

ಮೊದಲ ಮಳಯಂತೆ ಎದೆಗೆ ಇಳಿದೆ ಮೆಲ್ಲಗೆ
ಮೊದಲ ಕನಸಂತೆ ಸುಳಿದೆ ಮುಗಿಲ ಮಲ್ಲಿಗೆ
ಚಾಚಿದ ಕೈಗೆ ಆಕಾಶವೇ ತಾಗಿದೆ
ಗೀಚಿದ ಹಾಗೆ ಮಳೆಬಿಲ್ಲೆ ಮೈಗಂಟಿದೆ
ಹೊಸ ಸಂವತ್ಸರ ಹೊಸ ಮನ್ವಂತರ (ಹೊಸ ಸಂವತ್ಸರ ಹೊಸ ಮನ್ವಂತರ)
ಶುರುವಾಗಿದೆ ಆಗಿದೆ ಈಗ (ಶುರುವಾಗಿದೆ ಆಗಿದೆ ಈಗ)

Credits
Writer(s): Kaviraj, Jessie Gift
Lyrics powered by www.musixmatch.com

Link