Manase Manase (From "Om Ganesh")

ಮನಸೆ ಮನಸೆ ಥ್ಯಾಂಕ್ಯು
ನಿನಗು ಮನಸಾಯಿತು
ಕನಸೆ ಕನಸೆ ಥ್ಯಾಂಕ್ಯು
ಒಲವೆ ವರವಾಯಿತು

ಭೂಮಿಗೆ ಮಳೆ ಹನಿ ಬರಲು
ಸೂಚನೆ ನೂರಿದೆ
ಮನಸಿಗೆ ಪ್ರಣಯವು ಬರಲು
ಸೂಚನೆ ಎನಿದೆ
ಇದೆ
ಓ ಮನಸೆ ಮನಸೆ ಥ್ಯಾಂಕ್ಯು
ನಿನಗು ಮನಸಾಯಿತು
ಕನಸೆ ಕನಸೆ ಥ್ಯಾಂಕ್ಯು
ಒಲವೆ ವರವಾಯಿತು

ಅಣು ಅಣುವಿನ ಚಳಿ ಬಿಡಿಸುವ ಕೊಲುಮೆ ಇದೆ
ಕಣ ಕಣದಲಿ ಕಚಗುಳಿ ಇಡೊ ಚಿಲುಮೆ ಇದೆ
ಉಸಿರುಸಿರಲಿ ಪಿಸು ನುಡಿಗಳ ಕವನಾ ಇದೆ
ಚಡಪಡಿಸುವ ತಡವರಿಸುವ ಚಲನಾ ಇದೆ
ಆಣೆ ಭಾಷೆ ಹಾಡಾಗಿದೆ
ಬಯಕೆ ಹರಕೆ ಜೊತೆ ಸೆರಿದೆ
ಈ ನಮ್ಮ ಧಮನಿಯ ಒಳಗು
ನಿನ್ನದೆ ರೂಪವು
ಈ ನಮ್ಮ ಧರಣಿಯ ಹೊರಗೂ
ನಮ್ಮದೆ ಲೋಕವು
ಅಹ! ಆಹಾ!
ಮನಸೆ ಮನಸೆ ಥ್ಯಾಂಕ್ಯು
ನಿನಗು ಮನಸಾಯಿತು
ಕನಸೆ ಕನಸೆ ಥ್ಯಾಂಕ್ಯು
ಒಲವೆ ವರವಾಯಿತು

ಎದೆ ಮನೆಯಲಿ ಚಿಲಿಪಿಲಿಗಳ ಆಹ್ಲಾದವು
ಹದಿ ಹರೆಯಕೆ ಹೊಸ ಹುರುಪಿನ ಆನಂದವೊ
ಗುಸು ಗುಸು ಗುಸು ಮನ ಮನಗಳ ಸಮ್ಮೇಳವೊ
ಸರಿಗಮಗಳ ಸರಿಸಮಶೃತಿ ಸಂಗೀತವೊ
ಶ್ವಾಸಾ ಶ್ವಾಸಾ ಬೆರೆತಾಗಿದೆ
ಮೊದಲೊ ಕೊನೆಯೊ ಮರೆತಾಗಿದೆ
ಎಂದೆಂದೂ ತಿರುಗುವ ಜಗವ ನಿಂತುಕೊ ಎನ್ನುವಾ
ಕಾಲಾನೆ ಸರಿಯದೆ ಇರಲಿ ಎನ್ನುತಾ ಹಾಡುವಾ
ಮನಸೆ ಮನಸೆ ಥ್ಯಾಂಕ್ಯು
ನಿನಗು ಮನಸಾಯಿತು
ಕನಸೆ ಕನಸೆ ಥ್ಯಾಂಕ್ಯು
ಒಲವೆ ವರವಾಯಿತು
ಭೂಮಿಗೆ ಮಳೆ ಹನಿ ಬರಲು
ಸೂಚನೆ ನೂರಿದೆ
ಮನಸಿಗೆ ಪ್ರಣಯವು ಬರಲು
ಸೂಚನೆ ಎನಿದೆ
ಇದೆ ಇದೆ
ಮನಸೆ ಮನಸೆ ಥ್ಯಾಂಕ್ಯು
ನಿನಗು ಮನಸಾಯಿತು
ಕನಸೆ ಕನಸೆ ಥ್ಯಾಂಕ್ಯು
ಒಲವೆ ವರವಾಯಿತು

ಮುಕ್ತಾಯ



Credits
Writer(s): Sandeep Chowta, Nagendra Prasad
Lyrics powered by www.musixmatch.com

Link