Hennige Seere

ಹೆಣ್ಣಿಗೆ ಸೀರೆ ಯಾಕೆ ಅಂದ

ಹೆಣ್ಣಿಗೆ ಸೀರೆ ಯಾಕೆ ಅಂದ
ಆಹಾ! ಅಂದ ಚಂದ
ಅವಳ ಅಂದ ಒಳಗೆ ಅಡಗಿರೋದ್ರಿಂದ

ಸೀರೆಯಲ್ಲಿ ಹೆಣ್ಣು ಬೆಣ್ಣೆ, ಆಹಾ! ಬೆಣ್ಣೆಯಂತೆ
ಕರಗಿಹೋಗೋ ಆ ಹೃದಯದಂತೆ

ಹಣೆಯಲ್ಲಿ ಸಿಂಧು ಅಂದದ ಬಂಧು
ಕಣ್ಣಲ್ಲಿ ಕಾಡಿಗೆಯು ರುಚಿಯಾದ ಅಡಿಗೆ
ಇಂದು ಏಕೋ ಹೃದಯಕೆ ಹೆಣ್ಣಿನ ಅಂದವೇ
ಮದುವೆಯ ಭೋಜನವಂತೆ, ಮದುವೆಯ ಭೋಜನವಂತೆ
ಹೆಣ್ಣಿಗೆ ಸೀರೆ ಯಾಕೆ ಅಂದ

ಘಲ್ ಘಲ್ ಈ ಬಳೆಗಳು ನೋಡು
ಒಳ್ಳೆಯ ಶಕುನ ನೋಡು
ಝಲ್ ಝಲ್ ಗೆಜ್ಜೆಗಳು ನೋಡು
ಸ್ವರಗಳ, ಸ್ವರಗಳ ಸರಿಗಮ ನೋಡು
ಹೆಣ್ಣು ನಕ್ಕರೆ ಆ ದೀಪಾವಳಿ
ಹೆಣ್ಣು ನಡೆದರೆ ಆ ಸಂಕ್ರಾಂತಿ
ಬಂದು ಹೋಗೋ ಹಬ್ಬಗಳು ಯಾಕೆ ಬೇಕು
ಹೆಣ್ಣೇ ಕಣ್ಣಿಗೆ ಹಬ್ಬ
ಅಬ್ಬಬಬ್ಬ ಕಣ್ಣಿಗೆ ಹಬ್ಬ

ಹೆಣ್ಣಿಗೆ ಸೀರೆ ಯಾಕೆ ಅಂದ
ಆಹಾ! ಅಂದ ಚಂದ
ಅವಳ ಅಂದ ಒಳಗೆ ಅಡಗಿರೋದ್ರಿಂದ

ನವಿಲೇ ನನ್ನವಳೇ ಕೇಳೇ
ಹೃದಯದ ಮಾತು ಕೇಳೇ
ಸುಳ್ಳು ಪುಳ್ಳೂ ಎಲ್ಲ
ಹೆಣ್ಣಿಗೆ,ಹೆಣ್ಣಿಗೆ ಒಡವೆ ಬೇಕಿಲ್ಲ
ನಗುವೇ ಅವಳ ಒಡವೆಯಂತೆ
ಸಹನೆ ಅವಳ ಜೊತೆಯಂತೆ
ಭುವಿಗೆ ಅಲಂಕಾರ ಈ ಹೆಣ್ಣು
ಹೆಣ್ಣೇ ಕಣ್ಣಿಗೆ ಹಬ್ಬ
ಅಬ್ಬಬಬ್ಬ ಕಣ್ಣಿಗೆ ಹಬ್ಬ
ಹೆಣ್ಣಿಗೆ ಸೀರೆ ಯಾಕೆ ಅಂದ
ಆಹಾ! ಅಂದ ಚಂದ
ಅವಳ ಅಂದ ಒಳಗೆ ಅಡಗಿರೋದ್ರಿಂದ
ಸೀರೆಯಲ್ಲಿ ಹೆಣ್ಣು ಬೆಣ್ಣೆ, ಆಹಾ! ಬೆಣ್ಣೆಯಂತೆ
ಕರಗಿಹೋಗೊ ನನ್ನ ಹೃದಯದಂತೆ



Credits
Writer(s): Ravichandran V
Lyrics powered by www.musixmatch.com

Link