Kallarali Hoovaagi

ಕೊಟ್ರವ್ವ
ಎಲ್ಲವ್ವ
ಕನಕವ್ವ
ಲಚ್ಮವ್ವ
ಗಂಗವ್ವ
ಗೌರವ್ವ
ಯಾರಪ್ಪೋ

(ರತ್ನ)

ಕಲ್ಲರಳಿ
ಹೂವಾಗಿ
ಹೂವರಳಿ
ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಭಾಗ್ಯದ ಬಾಳಿನ ಬಳೆಗಾಗಿ
ಘಲ್ಲೆಂದಳು ಎದೆಯಲಿ ಪದವಾಗಿ

ಕಲ್ಲರಳಿ
ಹೂವಾಗಿ
ಹೂವರಳಿ
ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಅರಿಶಿನ ಕುಂಕುಮ ಸಿರಿಗಾಗಿ
ಝುಮ್ಮೆಂದಳು ಎದೆಯಲಿ ಪದವಾಗಿ
ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ

ಜೀ ಕಾಡಿಗೆ ಕಣ್ಣೋಳ ಕಿರುಗೆಜ್ಜೆ ದನಿಯ
ಬೆನ್ಹತ್ತಿದೆ ನನ್ನ ಪಂಚೇರು ಜೀವ
ಆ ದಿಬ್ಬ ಈ ದಿಬ್ಬ ಸುತ್ತೋಳ ಸಂಗ
ಜೀಕಾಡಿದೆ ನನ್ನ ಅರೆಪಾವು ಗುಂಡಿಗೆ
ನಿನಗೊಂದು ಕೋಟೆ, ಕಟ್ಟುವೆನು ನಾನು
ರಾಣಿಯಾಗಿ ನನ್ನ ಪಾಲಿಸುವೆಯೇನು
ನಿನಗೆ ನನ್ನೆದೆಯೆ ಅಂತಃಪುರ

ಕಲ್ಲರಳಿ
ಹೂವಾಗಿ
ಹೂವರಳಿ
ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಅಳಿಯದ ಹಚ್ಚೆಯ ಸುಖಕಾಗಿ
ಅಚ್ಚಾದಳು ಎದೆಯಲಿ ಪದವಾಗಿ
ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ

ಹೊಂದೇರ ಮೇಲೇರಿ ದುರ್ಗಾದ ಸೂರ್ಯ
ಮುಚ್ಚಿಟ್ಟ ರತ್ನನ ತೋರಿಸ್ದ ನನಗೆ
ಈ ರತ್ನಕ್ಕೆ ಚಿನ್ನದ ಕುಂದಣವಾಗೆ
ತರಾಸು ತಟ್ಟೆಲಿ ನನ್ನಿಟ್ಟ ಕೊನೆಗೆ
ನಿನ್ನ ನೆನೆ ನೆನೆಗೆ ಬಿಸಿಲಲು ಕನಸೆ
ನೀನು ಬಳುಕಾಡಿ ತೂಗುತಿದೆ ಪರಿಸೆ
ನಿನ್ನ ಅಂದಕ್ಕೆ ಅರಸಾದೆ ನಾ

ಕಲ್ಲರಳಿ
ಹೂವಾಗಿ
ಹೂವರಳಿ
ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಮಾನಸ ದೇಸಿ ವಧುವಾಗಿ
ಒಂದಾದಳು ಎದೆಯಲಿ ಪದವಾಗಿ

ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ



Credits
Writer(s): Hamsalekha
Lyrics powered by www.musixmatch.com

Link