Sevanthiye Sevanthiye

ಸೇವಂತಿಯೇ

ಸೇವಂತಿಯೇ ಸೇವಂತಿಯೇ
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಸೇವಂತಿಯೇ
ಸೇವಂತಿಯೇ
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು
ಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು
ಸೇವಂತಿಯೇ
ಸೇವಂತಿಯೇ
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ

(ಪಪಪ
ಮಮಮ)

ಮಲ್ಲಿಗೆ ಮಂಟಪವ ನನ್ನ ಮನಸಲ್ಲಿ ಕಟ್ಟಿಸುವೆ
ಅಂದದ ಸಿರಿದೇವಿಯ, ಅಲ್ಲಿ ಬಚ್ಚಿಟ್ಟು ಪೂಜಿಸುವೆ
ಭುವಿಯ ಹಸಿರಿನಂತೆ, ಈ ಪಾದದಡಿಗೆ ಇರುವೆ
ಮಳೆಯ ಮೊಡದಂತೆ, ಆ ಸುಡುವ ಬಿಸಿಲಾ ತಡೆವೆ
ಬಾಳಾ ತುಂಬ ನಾ ಬರುವೆ
ಹಸ್ತಕೆ ರೇಖೆಯ ಹಾಗಿರುವೆ
ಚಂದ ಚಂದದ ಸೇವಂತಿಯಾ ಅಂದಕೆ ಕಾವಲು ನಾನಿರುವೆ

ಸೇವಂತಿಯೇ
ಸೇವಂತಿಯೇ
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ

ಕಾಲ್ಗೆಜ್ಜೆ ನಾದದಲೀ ಈ ನನ್ನ ಗುಂಡಿಗೆ ಗೂಡು ಇದೆ
ಕೈಬಳೆ ಸದ್ದಿನಲೀ ನನ್ನ ಅಸೆಯ ಬುತ್ತಿ ಇದೆ
ಸಿಂಧೂರ ಬಿಂದಿಗೆಯಲ್ಲಿ ನಾ ಜೀವವ ತುಂಬಿದೆ ಅಲ್ಲಿ
ನೀನಿಟ್ಟ ಕಾಡಿಗೆಯಲ್ಲಿ
ನಾನಿಟ್ಟೆ ಪ್ರೀತಿಯ ಬಳ್ಳಿ
ನನ್ನ ಬಣ್ಣದ ಮನಸಿನಲಿ ನಿನ್ನ ಚಿತ್ರವ ಕೆತ್ತಿಸುವೆ
ಯಾರು ಇಲ್ಲದ ಆ ಊರಲಿ ನಾನೇ ನಿನ್ನವನಾಗಿರುವೆ

ಸೇವಂತಿಯೇ
ಸೇವಂತಿಯೇ
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮ ಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು



Credits
Writer(s): V. Manohar, S. Narayan
Lyrics powered by www.musixmatch.com

Link