Gaganave Baagi - From "Sanju Weds Geetha"

ಗಗನವೇ ಭಾಗಿ ಭುವಿಯನು ಕೇಳಿದ ಹಾಗೆ
ಕಡಲು ಕರೆದಂತೆ ನದಿಯನು ಭೇಟಿಗೆ
ಯಾರು ಬಂದಿರದ ಮನಸಲಿ
ನಿನ್ನ ಆಗಮನ ಈ ದಿನ
ನೀಡುವಾ ಮುನ್ನ ನಾನೇ ಆಮಂತ್ರಣಾ

ಗಗನವೇ ಭಾಗಿ ಭುವಿಯನು ಕೇಳಿದ ಹಾಗೆ
ಕಡಲು ಕರೆದಂತೆ ನದಿಯನು ಭೇಟಿಗೆ

ಜೀವನಾ ಈ ಕ್ಷಣಾ ಶುರುವಾದಂತಿದೆ
ಕನಸಿನಾ ಊರಿನಾ ಕದ ತೆರೆಯುತ್ತಿದೆ
ಅಳಬೇಕು ಒಮ್ಮೆ ಅಂತನಿಸಿದೆ
ಖುಶಿಯೀಗ ಮೇರೆ ಮೀರಿ
ಮಧುಮಾಸದಂತೆ ಕೈ ಚಾಚಿದೆ
ಹಸಿರಾಯ್ತು ನನ್ನ ದಾರಿ
ನೀಡುವಾ ಮುನ್ನ ನಾನೇ ಆಮಂತ್ರಣಾ

ಗಗನವೇ ಭಾಗಿ ಭುವಿಯನು ಕೇಳಿದ ಹಾಗೆ
ಕಡಲು ಕರೆದಂತೆ ನದಿಯನು ಭೇಟಿಗೆ
ಯಾರು ಬಂದಿರದ ಮನಸಲಿ
ಓ ನಿನ್ನ ಆಗಮನ ಈ ದಿನ
ನೀಡುವಾ ಮುನ್ನ ನಾನೇ ಆಮಂತ್ರಣಾ

ಸಾವಿನಾ ಅಂಚಿನಾ ಬದುಕಂತಾದೆ ನೀ
ಸಾವಿರಾ ಸೂರ್ಯರಾ ಬೆಳಕಂತಾದೆ ನೀ
ಕೊನೆಯಾಸೆ ಒಂದೇ ಈ ಜೀವಕೆ
ನಿನ ಕೂಡಿ ಬಾಳಬೇಕು
ಪ್ರತಿ ಜನ್ಮದಲ್ಲೂ ನೀ ಹೀಗೆಯೇ ನನ್ನ ಪ್ರೀತಿ ಮಾಡಬೇಕು
ನೀಡುವಾ ಮುನ್ನ ನಾನೇ ಆಮಂತ್ರಣಾ

ಗಗನವೇ ಭಾಗಿ ಭುವಿಯನು ಕೇಳಿದ ಹಾಗೆ
ಕಡಲು ಕರೆದಂತೆ ನದಿಯನು ಭೇಟಿಗೆ
ಯಾರು ಬಂದಿರದ ಮನಸಲಿ
ನಿನ್ನ ಆಗಮನ ಈ ದಿನ
ನೀಡುವಾ ಮುನ್ನ ನಾನೇ ಆಮಂತ್ರಣಾ



Credits
Writer(s): Kaviraj Kaviraj, Jessie Gift
Lyrics powered by www.musixmatch.com

Link