Gelathi Baaradu

ಗೆಳತಿ ಬಾರದು ಇಂಥಾ ಸಮಯ
ಗೆಳತಿ ಬಾರದು ಇಂಥಾ ಸಮಯ
ಅನುರಾಗ ಬೇಕೆಂದಿದೆ ಹೃದಯ
ಗೆಳತಿ ಬಾರದು ಇಂಥಾ ಸಮಯ

ನೋಡು ಹಿತವಾಗಿ ತಂಗಾಳಿ ಬೀಸಿ
ಹೂವ ಕಂಪನ್ನು ಎಲ್ಲೆಲ್ಲೂ ಹಾಸಿ

ನೋಡು ಹಿತವಾಗಿ ತಂಗಾಳಿ ಬೀಸಿ
ಹೂವ ಕಂಪನ್ನು ಎಲ್ಲೆಲ್ಲೂ ಹಾಸಿ
ಮೈಗೆ ಸೋಕಿ ತಂಪನ್ನು ಬೆರಸಿ
ಬಯಕೆ ಹೊಮ್ಮಿ ಹೊಮ್ಮಿ ಕಾಡುತಿರೇ
ಬಯಕೆ ಹೊಮ್ಮಿ ಹೊಮ್ಮಿ ಕಾಡುತಿರೇ
ಹಿತವಾದ ನೋವಿನಿಂದ ನಾ ಬೆಂದೆ

ಗೆಳತಿ ಬಾರದು ಇಂಥಾ ಸಮಯ

ಮನದಾಸೆ ನೀನೆತಕೆ ಕಾಣೆ
ನಿನ್ನಾಸೆ ಅದೇನಿದೆ ಜಾಣೆ

ಮನದಾಸೆ ನೀನೆತಕೆ ಕಾಣೆ
ನಿನ್ನಾಸೆ ಅದೇನಿದೆ ಜಾಣೆ
ಚಲುವೆ ತಾಳೆನು ಇನ್ನು ವಿರಹ
ಎದೆಯ ತುಂಬಿದೆ ನಿನ್ನಾ ಮೋಹ
ಒಲವಿಂದ ನೀ ಬಾರೆಯಾ ಸನಿಹ

ಗೆಳತಿ ಬಾರದು ಇಂಥ ಸಮಯ
ಅನುರಾಗ ಬೇಕೆಂದಿದೆ ಹೃದಯ
ಗೆಳತಿ ಬಾರದು ಇಂಥ ಸಮಯ



Credits
Writer(s): Chi Udayashanker, G K Venkatesh
Lyrics powered by www.musixmatch.com

Link