Kalladare Naanu

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

(ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯ ತಂದ
ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯ ತಂದ)

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ

ಹೂವಾದರೆ ನಾನು ಮುಕಾಂಬೆಯ ಪಾದದಿ ಇರುವೆ
ಹುಲ್ಲಾದರೆ ನಾನು ಆ ತುಂಗೆಯ ದಡದಲಿ ನಲಿವೆ
ಮಳೆಯಾದರೆ ನಾನು ಮಲೆನಾಡಿನ ಮೈಯನು ತೊಳಿವೆ
ಹೊಳೆಯಾದರೆ ನಾನು ಆ ಜೋಗದ ಸಿರಿಯಲಿ ಬೆರೆವೆ

ಪದವಾದರೆ ನಾನು ಪಂಪನ ಪುಟದಲಿ ಮೆರೆವೆ
ದನಿಯಾದರೆ ನಾನು ಕೋಗಿಲೆ ದನಿಯಾಗಿರುವೆ
ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ
ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ

(ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯ ತಂದ
ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯ ತಂದ)

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ

ನೆನಪಾದರೆ ನಾನು ಹಂಪೆಯ ಚರಿತೆಯ ಬೆರೆವೆ
ಮಂಜಾದರೆ ನಾನು ಕೊಡಗಿನ ಶಿರದಲಿ ಮೆರೆವೆ
ಬೆಳೆಕಾದರೆ ನಾನು ಕರುನಾಡಿಗೆ ಕಿರಣವ ಸುರಿವೆ
ಸ್ವರವಾದರೆ ನಾನು ದಾಸರ ಕಂಟದಿ ನಲಿವೆ
ಖಡ್ಗವಾದರೆ ನಾನು ಚೆನ್ನವ್ವನ ಕರದಲಿ ಮೆರೆವೆ
ಮರವಾದರೆ ನಾನು ಒಬ್ಬವನ ಒನಕೆಯ ಬೆರೆವೆ

ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ
ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ

(ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯ ತಂದ
ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯ ತಂದ)

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ



Credits
Writer(s): Deva, S. Narayan
Lyrics powered by www.musixmatch.com

Link