Bhaktajana

ಭಕ್ತಜನರನ್ನು ಪರೆವ ಅಂಬಿಕೇ ಮಹಾಮಾಯೆ ದುರ್ಗೆ
ಶಕ್ತಿರೂಪೆಯಾಗಿ ಬಂದು ಪಾಲಿಸಮ್ಮ
ಭಕ್ತಜನರನ್ನು ಪರೆವ ಅಂಬಿಕೇ ಮಹಾಮಾಯೆ ದುರ್ಗೆ
ಶಕ್ತಿರೂಪೆಯಾಗಿ ಬಂದು ಪಾಲಿಸಮ್ಮ
ಬಾರಮ್ಮ ಚಂದದಲ್ಲಿ
ಬಾರಮ್ಮ ಚಂದದಲ್ಲಿ
ಮಂದಹಾಸಿ ಬೀರಿ ಮುಂದೆ ದಾರಿ ತೋರಿ
ಪಾಲಿಸಮ್ಮ ಮಂದಾರ್ತಿ ಅಮ್ಮ
ಪಾಲಿಸಮ್ಮ ಶ್ರೀ ದುರ್ಗೇನಮ್ಮ
ಪಾಲಿಸಮ್ಮ ಮಂದಾರ್ತಿ ಅಮ್ಮ
ಪಾಲಿಸಮ್ಮ ಶ್ರೀ ದುರ್ಗೇನಮ್ಮ

ವಾಣಿ ಶ್ರೀಣಿ ನೀಲವೇಣಿ ಮಾರವೈರಿ ಹರನ ರಾಣಿ
ಪಾದ ಬೇಡಿಕೊಂಡೆನಮ್ಮ ಕರುಣೆ ತೋರು
ನೀ ವರವ ನೀಡು

ವಾಣಿ ಶ್ರೀಣಿ ನೀಲವೇಣಿ ಮಾರವೈರಿ ಹರನ ರಾಣಿ
ಪಾದ ಬೇಡಿಕೊಂಡೆನಮ್ಮ ಕರುಣೆ ತೋರು
ನೀ ವರವ ನೀಡು
ಕಾಳಿಮಹಾಂಕಾಳಿ ದುರ್ಗೇ ಆದಿಶಕ್ತಿ ಮಾಹೇಶ್ವರಿ
ಇಷ್ಟದೇವಿ ಕಷ್ಟ ಹರಿಸೇ ಬೇಡಿಕೊಂಡೆ
ನಾಮ ಹಾಡಿಕೊಂಡೇ
ದೋಷ ಕ್ಲೇಶ ಕಳೆವದಾತೇ ಮಾತೆ ದುರ್ಗೇ ಮಂದರ್ತಿಯೇ
ರಾಶಿ ಹೂವ ತಂದೆ ಹರಿವಾಣದಲ್ಲಿ, ಭಕ್ತಿ ನೇಮದಲ್ಲಿ
ಮೀಸಲಾಗಿ ಮಿಂದು ನಾಗತೀರ್ಥದಿ ಶುದ್ಧಳಾಗಿ
ವೀನತಳಾಗಿ ಬಂದೆ ನಾ ಸಿದ್ಧಿಗಾಗಿ ಮನ ಶುದ್ಧಿಗಾಗಿ

ಪಾಲಿಸಮ್ಮ ಮಂದಾರ್ತಿ ಅಮ್ಮ
ಪಾಲಿಸಮ್ಮ ಶ್ರೀ ದುರ್ಗೇನಮ್ಮ
ಪಾಲಿಸಮ್ಮ ಮಂದಾರ್ತಿ ಅಮ್ಮ
ಪಾಲಿಸಮ್ಮ ಶ್ರೀ ದುರ್ಗೇನಮ್ಮ

ಚಂದಿರವದನೆ ನಿನ್ನ ಸಿರಿಪಾದ ಪದ್ಮವನ್ನು
ಬಂದು ಭಕ್ತಿಯಲ್ಲಿ ನಾ ಬೇಡಿಕೊಂಡೆ ದೇವಿ ಹರೆಸು ಅಂಬೆ

ಚಂದಿರವದನೆ ನಿನ್ನ ಸಿರಿಪಾದ ಪದ್ಮವನ್ನು
ಬಂದು ಭಕ್ತಿಯಲ್ಲಿ ನಾ ಬೇಡಿಕೊಂಡೆ ದೇವಿ ಹರೆಸು ಅಂಬೆ
ಬಂದು ನಿಂದು ಬ್ರಹ್ಮರಾಂಬೆ ದಿವ್ಯಾಪಾದೆವ ನೆನೆದು
ನೊಂದು ಬೇಡಲೊಂದು ಭಯವು ಉಳಿಯಲಿಲ್ಲ, ದೋಷ ಕಳೆಯಿತಲ್ಲ
ಸಂದೇಹವ ಮಾಡದಿರು ನಂಬು ದೇವಿ ದುರ್ಗೆಯನ್ನು
ಚಂಡಿಕೆಯ ಮಹಾಮಾಯೆ ಜಗದಂಬೆ
ದೇವಿ ದುರ್ಗಾಂಬೆ
ಇಂದು ದೇವಿ ಧ್ಯಾನವನ್ನು ಮಾಡಿ ವಿವೇಕದಿ
ಚಂದದಿಂದ ಮುಕ್ತಿಯನ್ನು ಬೇಡು ಕಂಡ್ಯ ನೀ ಹಾಡು ಕಂಡ್ಯ

ಪಾಲಿಸಮ್ಮ ಮಂದಾರ್ತಿ ಅಮ್ಮ
ಪಾಲಿಸಮ್ಮ ಶ್ರೀ ದುರ್ಗೇಯಮ್ಮ
ಪಾಲಿಸಮ್ಮ ಮಂದಾರ್ತಿ ಅಮ್ಮ
ಪಾಲಿಸಮ್ಮ ಶ್ರೀ ದುರ್ಗೇನಮ್ಮ

ನೂರು ಬಾರಿ ಭಜಿಸಿ ನಿನ್ನ ಭಕ್ತಿಯಲ್ಲಿ ಸೇವೆಗೈದೆ
ಕ್ಲೇಶ ದೋಷಗಳ ದಹಿಸಿ ಗಿರಿಜೇ ಲಾಲಿಸೆ ದೇವಿ ವರವ ಪಾಲಿಸೆ

ನೂರು ಬಾರಿ ಭಜಿಸಿ ನಿನ್ನ ಭಕ್ತಿಯಲ್ಲಿ ಸೇವೆಗೈದೆ
ಕ್ಲೇಶ ದೋಷಗಳ ದಹಿಸಿ ಗಿರಿಜೇ ಲಾಲಿಸೆ ದೇವಿ ವರವ ಪಾಲಿಸೆ
ಸ್ಮರಣೆ ಮಾಡಿ ಬಂದು ಬೇಡಿ ಪುಣ್ಯಾ ಪಾವನ ಪಾದ
ಹೂವು ಗಂಧ ಅಕ್ಷತೆ ತಂದು ನಿಂತೇ ನೀ ಹರನ ಕಾಂತೆ
ವಾರಾಹಿಯ ಮಾತೆ ದುರ್ಗೇ ಯಕ್ಷಗಾನ ಸೇವೆ ಪ್ರಿಯೆ
ಬಂದು ನೀಡು ಶಕ್ತಿ ಆನಂದದಿಂದ ಮತ್ತೆ ಚಂದದಿಂದ
ನಾರಾಯಣಿ ಅಂಬಿಕೆಯೇ
ನಾರಾಯಣಿ ಅಂಬಿಕೆಯೇ ಆನಂದ ವರಗಳ ನೀಡಿ ಭಕುತ ಜನರ ಹರಸು ಮಂದಗಮನೇ ಶ್ರೀ ಚಂದ್ರವದನೇ

ಪಾಲಿಸಮ್ಮ ಮಂದಾರ್ತಿ ಅಮ್ಮ
ಪಾಲಿಸಮ್ಮ ಶ್ರೀ ದುರ್ಗೇನಮ್ಮ
ಪಾಲಿಸಮ್ಮ ಮಂದಾರ್ತಿ ಅಮ್ಮ
ಪಾಲಿಸಮ್ಮ ಶ್ರೀ ದುರ್ಗೇನಮ್ಮ

ಭಕ್ತಜನರನ್ನು ಪರೆವ ಅಂಬಿಕೇ ಮಹಾಮಾಯೆ ದುರ್ಗೆ
ಶಕ್ತಿರೂಪೆಯಾಗಿ ಬಂದು ಪಾಲಿಸಮ್ಮ
ಬಾರಮ್ಮ ಚಂದದಲ್ಲಿ
ಬಾರಮ್ಮ ಚಂದದಲ್ಲಿ
ಮಂದಹಾಸಿ ಬೀರಿ ಮುಂದೆ ದಾರಿ ತೋರಿ
ಪಾಲಿಸಮ್ಮ ಮಂದಾರ್ತಿ ಅಮ್ಮ
ಪಾಲಿಸಮ್ಮ ಶ್ರೀ ದುರ್ಗೇನಮ್ಮ
ಪಾಲಿಸಮ್ಮ ಮಂದಾರ್ತಿ ಅಮ್ಮ
ಪಾಲಿಸಮ್ಮ ಶ್ರೀ ದುರ್ಗೇನಮ್ಮ
ಪಾಲಿಸಮ್ಮ ಮಂದಾರ್ತಿ ಅಮ್ಮ
ಪಾಲಿಸಮ್ಮ ಶ್ರೀ ದುರ್ಗೇನಮ್ಮ
ಪಾಲಿಸಮ್ಮ ಮಂದಾರ್ತಿ ಅಮ್ಮ
ಪಾಲಿಸಮ್ಮ ಶ್ರೀ ದುರ್ಗೇನಮ್ಮ



Credits
Writer(s): Prasad Belur, Puttur Narasimha Nayak
Lyrics powered by www.musixmatch.com

Link