Naane Daari

ಈ ದೇಹದ ಗುಡಿಯಲ್ಲಿ ಬೆಳಕನ್ನು ಕಾಣುವೆ
ಬೆಟ್ಟದ ತುದಿಯಿಂದ ಕೂಗಿ ಹಾಡುವೆ
ಈ ದೇಹದ ಗುಡಿಯಲ್ಲಿ ಬೆಳಕನ್ನು ಕಾಣುವೆ
ಬೆಟ್ಟದ ತುದಿಯಿಂದ ಕೂಗಿ ಹಾಡುವೆ
ಆಗಸ ಧರೆಯ ಒಂದಾಗಿ ಮಾಡುವೆ
ಪಾತಾಳದಿಂದ ನಾ ಚಿಮ್ಮಿ ಬರುವೆ
ಆಗಸ ಧರೆಯ ಒಂದಾಗಿ ಮಾಡುವೆ
ಪಾತಾಳದಿಂದ ನಾ ಚಿಮ್ಮಿ ಬರುವೆ

ಸೋಲಲ್ಲೂ ಗೆಲುವಿನ ಪಾಠವ ಅರಿತೆನು
ಭಯದಲ್ಲೂ ಮೋಜಿನ ರಂಜನೆ ಕಂಡೆನು
ನನ್ನ ಉಸಿರೇ ಪ್ರಾಣ ಸ್ನೇಹಿತನು
ಹರುಷದಿಂದ ಜಗವ ನಾ ಗೆದ್ದೆನು
ನನಗೆ ನಾನೇ ದಾರಿ

ಯಾರಿದ್ದರೇನು ನನಗೆ ನೆನ್ನೆಯ ಮಾತು ನೆನ್ನೆಗೆ
ಇದು ನನ್ನ ಜೀವನ ಹಾಡಿದೆ ಯವ್ವನ
ಕುಣಿಯುವೆ ನವಿಲ ಹಾಗೆ
ಜಿಗಿಯುವೆ ಜಿಂಕೆಯ ಹಾಗೆ
ಈ ಮಣ್ಣೇ ಚಂದನ
ನನಗಿಲ್ಲ ಬಂಧನ

ಮನಸರಳಿ ಕನಸುಗಳು ಚಿಗುರಿವೆ
ಬಣ್ಣದ ಅಲೆಗಳು ಜೀವನವ ತುಂಬಿವೆ

ಮನಸು ಅರಳಿ ಕನಸುಗಳು ಚಿಗುರಿವೆ
ಬಣ್ಣದ ಅಲೆಗಳು ಜೀವನವ ತುಂಬಿವೆ
ನನ್ನ ಭರವಸೆ ನನಗೆ ಗುರುವಾಗಿದೆ
ಧೈರ್ಯದಿಂದ ನನ್ನ ನಾ ಕಂಡೆನು
ನನಗೆ ನಾನೇ ದಾರಿ

ಈ ದೇಹದ ಗುಡಿಯಲ್ಲಿ ಬೆಳಕನ್ನು ಕಾಣುವೆ
ಬೆಟ್ಟದ ತುದಿಯಿಂದ ಕೂಗಿ ಹಾಡುವೆ
ಈ ದೇಹದ ಗುಡಿಯಲ್ಲಿ ಬೆಳಕನ್ನು ಕಾಣುವೆ
ಬೆಟ್ಟದ ತುದಿಯಿಂದ ಕೂಗಿ ಹಾಡುವೆ
ಆಗಸ ಧರೆಯ ಒಂದಾಗಿ ಮಾಡುವೆ
ಪಾತಾಳದಿಂದ ನಾ ಚಿಮ್ಮಿ ಬರುವೆ
ಆಗಸ ಧರೆಯ ಒಂದಾಗಿ ಮಾಡುವೆ
ಪಾತಾಳದಿಂದ ನಾ ಚಿಮ್ಮಿ ಬರುವೆ (ವೆ, ವೆ, ವೆ, ವೆ, ವೆ, ವೆ, ವೆ, ವೆ)



Credits
Writer(s): Vasu Dixit, Pavan Kumar Kj, Sanjeeva Nayak Sooda, Jishnu Dasgupta, Varun Murali
Lyrics powered by www.musixmatch.com

Link