Thanuvu Ninnadu

ತನುವು ನಿನ್ನದು ಮನವು ನಿನ್ನದು
ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಘನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ಋಣವು ಮಾತ್ರವೇ ನನ್ನದು
ತನುವು ನಿನ್ನದು ಮನವು ನಿನ್ನದು

ನೀನು ಹೊಳೆದರೆ ನಾನೂ ಹೊಳೆವೆನು
ನೀನು ಬೆಳೆದರೆ ನಾನೂ ಬೆಳೆವೆನು

ನೀನು ಹೊಳೆದರೆ ನಾನೂ ಹೊಳೆವೆನು
ನೀನು ಬೆಳೆದರೆ ನಾನೂ ಬೆಳೆವೆನು
ನನ್ನ ಹರಣದ ಹರಣ ನೀನು
ನನ್ನ ಮರಣದ ಮರಣವು
ನನ್ನ ಮರಣದ ಮರಣವು

ತನುವು ನಿನ್ನದು ಮನವು ನಿನ್ನದು

ನನ್ನ ಮನದಲಿ ನೀನೆ ಯುಕ್ತಿ
ನನ್ನ ಹೃದಯದಿ ನೀನೆ ಭಕ್ತಿ

ನನ್ನ ಮನದಲಿ ನೀನೆ ಯುಕ್ತಿ
ನನ್ನ ಹೃದಯದಿ ನೀನೆ ಭಕ್ತಿ
ನೀನೇ ಮಾಯಾ ಮೋಹಶಕ್ತಿಯು
ನನ್ನ ಜೀವನ ಮುಕ್ತಿಯು
ನನ್ನ ಜೀವನ ಮುಕ್ತಿಯು

ತನುವು ನಿನ್ನದು ಮನವು ನಿನ್ನದು
ತನುವು ನಿನ್ನದು ತನುವು ನಿನ್ನದು
ತನುವು ನಿನ್ನದು ಮನವು ನಿನ್ನದು



Credits
Writer(s): Mysore Ananthaswamy, Kuvempu
Lyrics powered by www.musixmatch.com

Link