Neenendare Nannage Ishta Kaanu (From "Raam")

ನೀನೆಂದರೆ ನನಗೆ ಇಷ್ಟ ಕಣೋ
ನಿನ್ನಿಂದಲೇ ಪ್ರೀತಿ ಚೆಂದ ಕಣೋ
ಅಮರ ಮಧುರ, ಮಧುರ ಅಮರ ಅನುರಾಗ
ಜೊತೆ ನೀನಿರಲು, ಜೊತೆಯಾಗಿರಲು ಸ್ವರ್ಗ

ನೀನೆಂದರೆ ನನಗೆ ಇಷ್ಟ ಕಣೋ
ಓಹೋ, ನೀನೆಂದರೆ ನನಗೂ ಅಷ್ಟೇ ಕಣೇ

ಜೊತೆಗೆ ಜೊತೆಗೆ ನಡೆದು ಬೆರಳನು ಬೆಸೆಯುವ ತವಕ
ಹೃದಯ ಹೃದಯ ಮಿಡಿದು ಹೊಸ ಬಗೆ ಅನುಭವ ಪುಳಕ
ಕನಸೇ ಇರದ ನಿದಿರೆ ಏಕೆ?
ನೀನೇ ಇರದ ಬದುಕಿನ್ನೇಕೆ?
ಎಷ್ಟೋ ಒಲವ ಗುಣಿಸಿದ ಮೇಲೂ ನಮ್ಮ ಒಲವೇ ಮಿಗಿಲೋ ಮಿಗಿಲು

ನೀನೆಂದರೆ ನನಗೆ ಇಷ್ಟ ಕಣೋ
ನೀನಿಲ್ಲದೇ ಏನೂ ಇಲ್ಲ ಕಣೇ

ಪ್ರಣಯ ಜನಿಸೋ ಸಮಯ ಮನಸಿಗೂ ಮನಸಿಗೂ ಮಿಲನ
ಕೊನೆಯವರೆಗೂ ನಿಲದ ಸೆಲೆಯಿದು, ಒಲವಿನ ಕವನ
ಪುನಹ ಪುನಹ ಬಯಸಿ ಸನಿಹ
ತರಹ ತರಹ ಹೊಸದೀ ವಿರಹ
ಇಷ್ಟ ಆಗೋ ಅರಳು ಮರಳು, ಇನ್ನೂ ಬೇಕು ಅನಿಸೋ ಅಮಲು
ಮನಸೇ, ನಿನ್ನನು ಮರೆಯೋ ಮಾತೆಲ್ಲಿದೆ
ನಿನ್ನಿಂದಲೇ ಬದುಕು ಚೆಂದ ಕಣೇ

ಅಮರ ಮಧುರ
ಮಧುರ ಅಮರ
ಅನುರಾಗ
ಜೊತೆ ನೀನಿರಲು
ಜೊತೆಯಾಗಿರಲು
ಸ್ವರ್ಗ
ನೀನೆಂದರೆ ನನಗೆ ಇಷ್ಟ ಕಣೋ
ಓಹೋ, ನೀನೆಂದರೆ ನನಗೂ ಅಷ್ಟೇ ಕಣೇ



Credits
Writer(s): V. Nagendra Prasad, V. Harikrishna
Lyrics powered by www.musixmatch.com

Link