Thayi Thayi

ಮಾಯಗಾತಿ ನಿಂಗವ್ವ ನಿಂಗವ್ವ
ನನ್ನ ಮ್ಯಾಲೆ ಬೀಳಬ್ಯಾಡವೇ ನಿಂಗವ್ವ
ಮಾಯಗಾರ ನಿಂಗಯ್ಯ ನಿಂಗಯ್ಯ
ನನ್ನ ಒಪ್ಪಿಕೊಳ್ಳದಿದ್ದರೆ ಹೆಂಗಯ್ಯಾ
ಹೇ ಕೆಂಚಕ್ಕ, ರಂಗಕ್ಕ, ಚೆನ್ನಕ್ಕ, ಮಲ್ಲಕ್ಕ
ನೋಡಿರಕ್ಕ ನನ್ನ ದುಃಖ
ಮೈಯ್ಯ ಮ್ಯಾಲೆ ಬೀಳುತ್ತಾಳೆ ನಿಂಗವ್ವ
ತಪ್ಪು ಮಾಡಬ್ಯಾಡ ಅಂತ ಒಸಿ ಹೇಳ್ರವ್ವ
ಊರು ಊರು ಹೇಳಿದರೂ ಕೇಳಲ್ಲ
ನೀನು ಒಪ್ಪಿಕೊಳ್ದೆ ನಾನು ಸುಮ್ನೆ ಇರೋಲ್ಲ

ಚಂದವಳ್ಳಿ ತೋಟದಾಗೆ ಸಂಜೆಮಬ್ಬು ಆದಮ್ಯಾಗೆ
ಸಿಕ್ಕಿದರೆ ನೀನು ನನಗೆ ಮುತ್ತುಗಳ ಮೂಟೆ ಕೊಡುವೆ
ಬಾರಾಯ್ಯೋ... ಬಾರಾಯ್ಯೋ
ಹೇ ಜೊಲ್ಲು ಬಿಡೋ ಹೈದನು ನಾನಲ್ಲ
ಅರೆ ಏನೇಯಾದ್ರು ನಿಂಗಂತೂ ಬೀಳಲ್ಲ
ಕೊಳ್ಳೇಗಾಲ ನಮ್ಮೂರು ಕಾಣಯ್ಯ
ಮಂತ್ರಹಾಕಿ ನಿನ್ನ ಮೆಚ್ಚಿಸುವೆ ಮಾವಯ್ಯ
ಅಮ್ಮಯ್ಯ ಅಮ್ಮಯ್ಯ ದಮ್ಮಯ್ಯ ದಮ್ಮಯ್ಯ
ಅಂಗಿ ಬೀಡೆ, ನನ್ನ ಬಿಟ್ಟುಬಿಡೇ

ಮಾಯಗಾತಿ ನಿಂಗವ್ವ ನಿಂಗವ್ವ
ನನ್ನ ಮ್ಯಾಲೆ ಬೀಳಬ್ಯಾಡವೇ ನಿಂಗವ್ವ
ಮಾಯಗಾರ ನಿಂಗಯ್ಯ ನಿಂಗಯ್ಯ
ನನ್ನ ಒಪ್ಪಿಕೊಳ್ಳದಿದ್ದರೆ ಹೆಂಗಯ್ಯಾ

ಹೇ, ಮಾರುಭೂಮಿ ಹಬ್ಬದಾಗೆ ನಮ್ಮ ಹಳ್ಳಿ ಹಳ್ಳದಾಗೆ
ಹಿಂದೆಯಿಂದ ಬಂದು ನೀನು ಇಂಗಿಲೀಸು ಬಾಸೆದಾಗೆ
ಏನಂದೆ... ಏನಂದೆ
I love you ಕಣೋ, you ಕಣೋ
ಅಂದ್ರೆ ನಿನ್ನ ಪ್ರೀತಿ ಮಾಡುವೆ ಅಂತಾನೋ
ನೀನು ಯಾವ ಸೀಮೆ ಹೆಣ್ಣಮ್ಮೋ ಹೆಣ್ಣಮ್ಮೋ
ನನ್ನ ಬೆನ್ನುಬಿದ್ದ ಬೇತಾಳ ನೀನಮ್ಮೋ
ಹೇ, ಆಗಿದ್ದು ಆಗೈತೆ ಹಳ್ಳಿಗೆ ಗೊತ್ತೈತೆ
ಒಪ್ಕೋಳಯ್ಯೋ ಬಾಲ್ಕ ಊದಿಸಯ್ಯೋ

ಮಾಯಗಾತಿ ನಿಂಗವ್ವ ನಿಂಗವ್ವ
ನನ್ನ ಮ್ಯಾಲೆ ಬೀಳಬ್ಯಾಡವೇ ನಿಂಗವ್ವ
ಮಾಯಗಾರ ನಿಂಗಯ್ಯ ನಿಂಗಯ್ಯ
ನನ್ನ ಒಪ್ಪಿಕೊಳ್ಳದಿದ್ದರೆ ಹೆಂಗಯ್ಯಾ



Credits
Writer(s): Hamsalekha Hamsalekha, Rabindra Prasad Pattnaik
Lyrics powered by www.musixmatch.com

Link