Akasha Este Yakedyu (From "Gaalipata")

ನನೈ ನನನೈ... ನನೈ ನನನೈ... ನನೈ ನನನೈನಿ... ನನೈ ನನನೈ

ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಹಂಚೋಣ ಈ ಪ್ರೀತಿ ಬೇಕಿಲ್ಲ ರಸೀತಿ
ಮುಗಿಲನ್ನೆ ಮುದ್ದಾಡಿ ರೆಕ್ಕೆ ಬಿಚ್ಚಿ ಹಾರೋ ನಾವೆ...
ಗಾ... ಳಿಪಟ
ಗಾ... ಳಿಪಟ
ಗಾ... ಳಿಪಟ

ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ

ಕನಸಿನ ನೋಟಿಗೆ ಚಿಲ್ಲರೆ ಬೇಕೇ
ನಗುವನ್ನು ಎಲ್ಲೋ ಮರೆತಿರುವೇಕೆ
ಕಿಸೆಯಲ್ಲಿ ಕದ್ದ ಚಂದ್ರನ ಚೂರು
ನಮ್ಮನ್ನು ಪತ್ತೆ ಮಾಡುವರಾರು
ಹೋಳಾಗಿದೆ ಈ ಭೂಪಟ
ಹಾರಾಟವೇ ನಮ್ಮ ಹಟ...
ಗಾ... ಳಿಪಟ
ಗಾ... ಳಿಪಟ
ಗಾ... ಳಿಪಟ

ಕಾಮನಬಿಲ್ಲು ಬಾಡಿಗೆಗುಂಟೆ
ಸ್ನೇಹಕ್ಕು ಕೂಡ ರೇಶನ್ ಬಂತೆ
ಸಂಭ್ರಮಕಿಲ್ಲ ಸೀಸನ್ ಟಿಕೇಟು
ಏರಿಸಬೇಕು ನಮ್ಮ ರಿಬೇಟು
ಇದು ಪ್ರೀತಿಯ ಚಿತ್ರಪಟ
ಈ ದೋಸ್ತಿಯೆ ನಮ್ಮ ಚಟ...
ಗಾ... ಳಿಪಟ
ಗಾ... ಳಿಪಟ
ಗಾ... ಳಿಪಟ

ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಇಲ್ಲೇನೋ ಸರಿಯಿಲ್ಲ ಇನ್ನೇನೋ ಬೇಕಲ್ಲ
ನಕ್ಷತ್ರ ಲೋಕಕ್ಕೆ ಲಗ್ಗೆ ಇಟ್ಟು ಹಾರೋ ನಾವೆ...
ಗಾ... ಳಿಪಟ
ಗಾ... ಳಿಪಟ
ಗಾ... ಳಿಪಟ



Credits
Writer(s): V Harikrishna, Jayanth Kaykini
Lyrics powered by www.musixmatch.com

Link