Om Hindu Guruthu

ಓಂ ಹಿಂದೂ ಗುರುತು
Cross ಜೀಸಸ್ ಗುರುತು
Moon star ಇಸ್ಲಾಂ ಗುರುತು
Heart-ಏ ಪ್ರೀತಿಯ ಗುರುತು
ಕನ್ನಡದ ಕೈ, ಕೈ ಹಿಡಿಯೋ ಕೈ
ಸತ್ಯವನ್ನು ಕಾಯೋ ಪುಣ್ಯಕೋಟಿ ಕೈ
ರಾಜಾಹುಲಿ ರಾಜಾಹುಲಿ
ಸ್ನೇಹಕ್ಕೆ ಜೀವ ನೀಡೋ ಗುರುತು
ಓಂ ಹಿಂದೂ ಗುರುತು
ಓಂ ಹಿಂದೂ ಗುರುತು

ಕನ್ನಡ ನಾಡಾಂದ್ರೆ ಮುತೈದೆ ನೆತ್ತಿಯ ಅರಶಿನ ಕುಂಕುಮವೇ ಗುರುತು
ಕನ್ನಡ ಏನೆಂದ್ರೆ ವರ್ಣಿಸಲಾಗದ ಕಸ್ತೂರಿಯ ಕಂಪೇ ಗುರುತು
ಕನ್ನಡಿಗ ಕನ್ನಡಿಗ ನಾನು ಎನ್ನಲೆನಗೆ ಆತುರ
Englishಯಿನ ಇಬ್ಬಂದಿಗೆ ಸೆಡ್ಡು ಹೊಡೆದು ನಿಲ್ಲುವ ಕಾತುರ
ಭಕ್ತಿಯಲಿ ಎಲ್ಲೀ ಜಾತಿ ಗೀತಿ ಇಲ್ಲ
ಕಪ್ಪು ನೆಲದ ಜಲವೆಲ್ಲ ಬೆಲ್ಲ
ಸಾಮರಸ್ಯ ನಮ್ ಗುರುತು
(ನಮ್ ಗುರುತು
ನಮ್ ಗುರುತು)
ಮುತ್ತುರಾಜನೆಂದ್ರೆ ಯಲ್ಲರಿಗೂ ಗೊತ್ತು
ಕೊಹಿನೂರ್ಗಿಂತ costly ಆ ಮುತ್ತು
ರಾಜಕುಮಾರೇ ನಮ್ಮ ವಿನಯದ ಗುರುತು
ಓಂ ಹಿಂದೂ ಗುರುತು
ಓಂ ಹಿಂದೂ ಗುರುತು
(ಗುರುತು, ಗುರುತು, ಗುರುತು)

ಸ್ನೇಹಕ್ಕೆ ಅರ್ಥಾನೇ ಇಲ್ಲ ಇಬ್ಬರು ಸ್ನೇಹಿತರು ಕಷ್ಟ ಪಡದೆ
(ಕಷ್ಟ ಪಡದೆ
ಕಷ್ಟ ಪಡದೆ)
ಸ್ನೇಹಿತ ಎಂದು ಒಪ್ಪಿಕೊಂಡ ಮೇಲೆ ಒಳ್ಳೇದು ಕೆಟ್ಟದು ಎಲ್ಲ ನಮದೇ (ಎಲ್ಲ ನಮದೇ)
ದುಡ್ಡಿರಲಿ ಇಳ್ದಿರಲಿ ನಗುವಿನ ಒಡೆಯ ಗೆಳೆಯ
Love ಇರಲಿ loss ಇರಲಿ ಬೆಂಬೆಲದ ಬೆಟ್ಟವೋ ಗೆಳೆಯ
ಸ್ವಾರ್ಥವಿಲ್ಲದಿದ್ರೆ ಹೆಂಡ್ತಿ ಮಕ್ಕಳಲ್ಲ
ಕಿತ್ತು ತಿನ್ನದಿದ್ರೆ ಬಂಧುಗಳೇ ಇಲ್ಲ
ಸ್ನೇಹ ಒಂದೇ ನಿಸ್ವಾರ್ಥ
(ನಿಸ್ವಾರ್ಥ
ನಿಸ್ವಾರ್ಥ)
ನಮ್ಮ ಮಾನ ಮುಚ್ಚೋ ಬಟ್ಟೆ ಕಳಚಿಬಿದ್ರೆ
ಎಷ್ಟು ಬೇಗ ನಾವು ಎಚ್ಚರಾಗುತಿವೋ
ಅಷ್ಟು ಬೇಗ ಧಾವಿಸಬೇಕೋ
ಒಬ್ಬ ಗೆಳೆಯನ ಕಷ್ಟಕೆ

ಓಂ ಹಿಂದೂ ಗುರುತು (ಹಿಂದೂ ಗುರುತು)
Cross ಜೀಸಸ್ ಗುರುತು (ಜೀಸಸ್ ಗುರುತು)
Moon star ಇಸ್ಲಾಂ ಗುರುತು (ಇಸ್ಲಾಂ ಗುರುತು)
Heart-ಏ ಪ್ರೀತಿಯ ಗುರುತು
ಕನ್ನಡದ ಕೈ, ಕೈ ಹಿಡಿಯೋ ಕೈ
ಸತ್ಯವನ್ನು ಕಾಯೋ ಪುಣ್ಯಕೋಟಿ ಕೈ
ರಾಜಾಹುಲಿ ರಾಜಾಹುಲಿ
ಸ್ನೇಹಕ್ಕೆ ಜೀವ ನೀಡೋ ಗುರುತು
ಓಂ ಹಿಂದೂ ಗುರುತು
ಓಂ ಹಿಂದೂ ಗುರುತು



Credits
Writer(s): Hamsalekha
Lyrics powered by www.musixmatch.com

Link