Baare Nanna Shaarade

ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ
ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ
ಹಿಂದೆ ಮುಂದೆ ನೋಡದೆ ಎದುರು ಮಾತನಾಡದೆ
ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ
ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ

ಕೋಣೆಯೊಳಗೆ ಬಳೆಯ ಸದ್ದು
ನಗುವರತ್ತೆ ಬಿದ್ದು ಬಿದ್ದು
ಸುಮ್ಮನಿರಲು ಮಾವನವರು
ಒಳಗೆ ಅಕ್ಕ ಭಾವನವರು
ಎಂದು ತುಂಟ ಹುಡುಗನು
ಗುಟ್ಟ ಬಯಲಿಗೆಳೆವನು

ಮದುವೆಯಾಗಿ ತಿಂಗಳಿಲ್ಲ

ಒಂದು ಹೆಣ್ಣಿಗೊಂದು ಗಂಡು
ಹೇಗೋ ಸೇರಿ ಹೊಂದಿಕೊಂಡು
ಕಾಣದೊಂದ ಕನಸ ಕಂಡು
ಮಾತಿಗೊಲಿಯದಮೃತ ಉಂಡು
ದುಖ: ಹಗುರವೆನುತಿರೆ ಪ್ರೇಮವೆನಲು ಹಾಸ್ಯವೇ

ಯಾರು ಕದ್ದು ನುಡಿದರೇನು
ಊರೇ ಎದ್ದು ಕುಣಿದರೇನು
ಜನರ ಬಾಯಿಗಿಲ್ಲ ಬೀಗ
ಹೃದಯದೊಳಗೆ ಪ್ರೇಮ ರಾಗ
ಇಂಥ ಕೂಗನಳಿಸಿದೆ ಬೆಳಗಿ ಬದುಕ ಹರಿಸಿದೆ

ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ
ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ

ಇಂದೆ ಅದಕೆ ಕರೆವುದು
ನನ್ನ ಹುಡುಗಿ ಎನುವುದು
ಹೂವ ಮುಡಿಸಿ ನಗುವುದು
ಅಪ್ಪಿ ಮುತ್ತನಿಡುವುದು

ಬಾರೆ ನನ್ನ ಶಾರದೆ ಬಾರೆ ಅತ್ತ ನೋಡದೆ
ಬಾರೆ ನನ್ನ ಶಾರದೆ ಬಾರೆ ಅತ್ತ ನೋಡದೆ
ಬಾರೆ ನನ್ನ ಶಾರದೆ ಬಾರೆ ಅತ್ತ ನೋಡದೆ



Credits
Writer(s): C Aswath, K.s. Narasimha Swamy
Lyrics powered by www.musixmatch.com

Link