Baaro Manege Gopala

ಬಾರೋ ಮನೆಗೆ ಗೋಪಾಲ ಆಶ್ರಿತ ದೀನಾರ್ತಿಪಾಲಕ
ಬಾರೋ ದಯಾಳನೇ, ದಯಾಳನೇ

ಬಾರೋ ಮನೆಗೆ ಗೋಪಾಲ ಆಶ್ರಿತ ದೀನಾರ್ತಿಪಾಲಕ
ಬಾರೋ ದಯಾಳನೇ, ದಯಾಳನೇ
ತೀರಿಸೋ ತಳಮಳ ಪಾಲಿಸೋರ ಮಾಲೋಲ
ತೀರಿಸೋ ತಳಮಳ ಪಾಲಿಸೋರ ಮಾಲೋಲ
ಆದರ ತೋರೋ ನಾ ನಿನ್ನ ಬೇಡುವೆ
ಒಲಿದು ಬಾರೋ ಮನೆಗೆ ಗೋಪಾಲ ಆಶ್ರಿತ ದೀನಾರ್ತಿಪಾಲಕ
ಬಾರೋ ದಯಾಳನೇ, ದಯಾಳನೇ

ತಂದೆ ನೀನು ಘನ ಭಾಗ್ಯ ಕುಚೇಲನಿಗೆ
ತಂದೆ ನೀನು ಘನ ಭಾಗ್ಯ ಕುಚೇಲನಿಗೆ
ಅಂದು ನೀನು ಸಾರಥಿ ಆಗಿಹೆ ನರನಿಗೆ
ಅಂದು ನೀನು ಸಾರಥಿ ಆಗಿಹೆ ನರನಿಗೆ
ಬಂದು ದ್ರೌಪದಿಗಂದು ಮಾನವನು ನೀ ಸಲಹಿದೆ
ಬಂದು ನಿನ್ನ ಮುಂದೆ ನಾನಿಂತೆ ಕರುಣಿಸಿ

ಬಾರೋ ಮನೆಗೆ ಗೋಪಾಲ ಆಶ್ರಿತ ದೀನಾರ್ತಿಪಾಲಕ
ಬಾರೋ ದಯಾಳನೇ, ದಯಾಳನೇ

ಪಾಲಿಸುಯೆನೆ ಕರಿರಾಜ ಕೂಗಲು ಕೇಳಿ
ಬೇಗ ಬಂದು ಪೊರೆದೆ ಶಾಪವ ಅಳಿಸಿದೆ
ಪಾಲಿಸುಯೆನೆ ಕರಿರಾಜ ಕೂಗಲು ಕೇಳಿ
ಬೇಗ ಬಂದು ಪೊರೆದೆ ಶಾಪವ ಅಳಿಸಿದೆ
ಬೇಡಿ ನಾ ಬಳಿ ಬಂದೆ
ಬೇಡಿ ನಾ ಬಳಿ ಬಂದೆ ಆಲಿಸೋ ಮೊರೆಯನ್ನು
ಬೇಡಿ ನಾ ಬಳಿ ಬಂದೆ ಆಲಿಸೋ ಮೊರೆಯನ್ನು
ದೇವಾ ಪ್ರೀತಿಯ ತೋರಿ ವೇಣುಲೋಲನೆ ಪ್ರಭುವೇ

ಬಾರೋ ಮನೆಗೆ ಗೋಪಾಲ ಆಶ್ರಿತ ದೀನಾರ್ತಿಪಾಲಕ
ಬಾರೋ ದಯಾಳನೇ, ದಯಾಳನೇ
ತೀರಿಸೋ ತಳಮಳ ಪಾಲಿಸೋರ ಮಾಲೋಲ
ಆದರ ತೋರೋ ನಾ ನಿನ್ನ ಬೇಡುವೆ
ಒಲಿದು ಬಾರೋ ಮನೆಗೆ ಗೋಪಾಲ ಆಶ್ರಿತ ದೀನಾರ್ತಿಪಾಲಕ
ಬಾರೋ ದಯಾಳನೇ, ದಯಾಳನೇ



Credits
Writer(s): Traditional, Puttur Narasimha Nayak
Lyrics powered by www.musixmatch.com

Link