Annayya Annayya

ಅಣ್ಣಯ್ಯ ಅಣ್ಣಯ್ಯ ಬಾರೋ, ಅಮ್ಮನ ಮಡಿಲ ಸೇರೋ
ಜೋಗುಳ ಹಾಡುವೆ, ಜೋಗುಳ ಹಾಡುವೆ
ಅಣ್ಣಯ್ಯ ಅಣ್ಣಯ್ಯ ಬಾರೋ, ಅಮ್ಮನ ಮಡಿಲ ಸೇರೋ
ಜೋಗುಳ ಹಾಡುವೆ, ಜೋಗುಳ ಹಾಡುವೆ
ಹಸುವಿಗೂ ಕರುವಿಗೂ ಮೂಕ ನಂಟಿದೆ
ಅಮ್ಮನಿಗೂ ಕಂದನಿಗೂ ಲಾಲಿ ನಂಟಿದೆ

ಅಣ್ಣಯ್ಯ ಅಣ್ಣಯ್ಯ ಬಾರೋ, ಅಮ್ಮನ ಮಡಿಲ ಸೇರೋ
ಜೋಗುಳ ಹಾಡುವೆ, ಜೋಗುಳ ಹಾಡುವೆ

ಓ, ಮಗುವೇ, ನೀ ನನ್ನ ಜೀವನ, ನಾ ನಿನ್ನ ಗಾಯನ
ರೂಪವು ಬೇರೆ, ನಾಮವು ಬೇರೆ
ಉಸಿರೊಂದೇ ಉಸಿರೊಂದೇ
ಅಮ್ಮಾ, ನನಗೆಲ್ಲಾ ಇದ್ದರೂ, ನೀನೇನೆ ದೇವರು

ಅಣ್ಣಯ್ಯ ಅಣ್ಣಯ್ಯ ಬಾರೋ, ಅಮ್ಮನ ಮಡಿಲ ಸೇರೋ
ಜೋಗುಳ ಹಾಡುವೆ, ಜೋಗುಳ ಹಾಡುವೆ

ಓ, ಅಮ್ಮಾ ನಾ ನಿನ್ನ ಕೂಗಿದೆ, ನೀ ನನ್ನ ಸೇರಿದೆ
ಗುರುವು ನೀನೆ, ಗುರುಕುಲ ನೀನೆ
ನಿನ್ನಾಣೆ ಪಾಲಿಸುವೆ
ಕಂದಾ ನೀ ನನ್ನ ಭಾಗ್ಯವೋ, ಪೂರ್ವದ ಪುಣ್ಯವೋ
ಅಮ್ಮಯ್ಯ ಅಮ್ಮಯ್ಯ ಬಾರೆ, ಅಕ್ಕರೆ ಸಕ್ಕರೆ ತಾರೆ
ಜೋಗುಳ ಕೇಳುವೆ, ನಿದ್ದೆಯ ಮಾಡುವೆ

ಅಣ್ಣಯ್ಯ ಅಣ್ಣಯ್ಯ ಬಾರೋ, ಅಮ್ಮನ ಮಡಿಲ ಸೇರೋ
ಜೋಗುಳ ಹಾಡುವೆ, ಜೋಗುಳ ಹಾಡುವೆ
ಹಸುವಿಗೂ ಕರುವಿಗೂ ಮೂಕ ನಂಟಿದೆ
ಅಮ್ಮನಿಗೂ ಕಂದನಿಗೂ ಲಾಲಿ ನಂಟಿದೆ
ಅಮ್ಮಯ್ಯ ಅಮ್ಮಯ್ಯ ಬಾರೆ, ಅಕ್ಕರೆ ಸಕ್ಕರೆ ತಾರೆ
ಜೋಗುಳ ಕೇಳುವೆ, ನಿದ್ದೆಯ ಮಾಡುವೆ



Credits
Writer(s): Hamsalekha
Lyrics powered by www.musixmatch.com

Link