Hey Hudugi

ಹೇ ಹುಡುಗಿ
ಹೇ ಹುಡುಗಿ
ಹೇ ಹುಡುಗಿ ಜಿಂಕೆ ಆದೆಯಲ್ಲೇ
ಈ ಹುಲಿಗೆ ಗೆಳತಿ ಆದೆಯಲ್ಲೇ
ಕಾಡಿನ ಕಥೆಯಲಿ ನಾನು ನೀನು ಜೊತೆಯಲಿ
ಮರದ ಮರೆಯಲಿ ಪ್ರೇಮ ಕಥೆಯು ಸಾಗಲಿ
ಬೇಟೆ ತಾನೇ ಬಂದು ಬಯಕೆ ಹೇಳಿದೆ
ಬೇಲಿ ಹಾರಿ ಜಿಂಕೆ ಹುಲಿಗೆ ಸೇರಿದೆ

ಹೇ ಹುಡುಗಿ... ಜಿಂಕೆ ಆದೆಯಲ್ಲೇ

ಬೆಂಕಿ ಅಂತ ಅಂದುಕೊಂಡೆ ನಾನು
ಬೆಳಕು ಅಂತ ತಿಳಿಸಿ ಕೊಟ್ಟೆ ನೀನು
ಅಡವಿ ದಂಗಾಗಿ ಮೂಕವಾಗಿದೆ
ಮುಗಿಲೆ ನೀರಾಗಿ ಜೋಗವಾಗಿದೆ

ಹಾಡಿದೆ ಕಾಡು ಹೆಜ್ಜೆ ಹಾಕಿದೆ
ಕಾಲವೇ ನೀನು ನಿಲ್ಲಬಾರದೇ
ಸಮಯದ ಪರಿವೇಕೆ ಈಗ
ಸಲುಗೆಯ ಹೂವು ಅರಳುವಾಗ

ವಿರಹಕೆ ಮೊಡವೆ ಮೂಡಿದಾಗ
ಸರಸಕೆ ಹುಡುಕಬೇಕೆ ಜಾಗ

ಬೇಟೆ ತಾನೆ ಬಂದು ಬಯಕೆ ಹೇಳಿದೆ
ಬೇಲಿ ಹಾರಿ ಜಿಂಕೆ ಹುಲಿಗೆ ಸೇರಿದೆ

ಹೇ ಹುಡುಗ... ನಾನು ಜಿಂಕೆಯಾದೆ

ನಾಲ್ಕು ಪಾದ ಜೋಡಿಯಾಗಿ ಬರಲು
ಅಂಗೈ ಮೇಲೆ ಕೂಡಿ ಹೋಯ್ತು ಬೆವರು
ಯಾಕೆ ಸಂಕೋಚ ಮುದ್ದು ಮಾಡಲು
ಯಾರು ಇಲ್ಲಿಲ್ಲ ದೂರು ನೀಡಲು

ಕಾಡಲಿ ರಾಜ್ಯಭಾರ ಮಾಡುವ
ರಾಜ ರಾಣಿಯಾಗಿ ನಾವು ಬಾಳುವ
ಚಿಗರೆಯ ಮಾತು ಕೇಳಿದಾಗ
ಪೊಗರಿಗೆ ಬಿತ್ತು ಒಲವ ಬೀಗ

ಮುಳುಗಲಿ ಮುಗುಳುನಗೆಯ ಒಳಗೆ
ಮಲಗಲಿ ನಿನ್ನ ನೆರಳ ಕೆಳಗೆ
ಬೇಲಿ ಹಾರಿ ನಾನು ನಿನ್ನ ಸೇರಿದೆ
ಹೌದು ಜಿಂಕೆ ಹುಲಿಯ ಪ್ರೀತಿ ಮಾಡಿದೆ

ಹೇ ಹುಡುಗಿ ಜಿಂಕೆ ಆದೆಯಲ್ಲೇ
ಈ ಹುಲಿಗೆ ಗೆಳತಿ ಆದೆಯಲ್ಲೇ

ಕಾಡಿನ ಕಥೆಯಲಿ ನಾನು ನೀನು ಜೊತೆಯಲಿ
ಮರದ ಮರೆಯಲಿ ಪ್ರೇಮ ಕಥೆಯು ಸಾಗಲಿ
ಬೇಲಿ ಹಾರಿ ನಾನು ನಿನ್ನ ಸೇರಿದೆ
ಹೌದು ಜಿಂಕೆ ಹುಲಿಯ ಪ್ರೀತಿ ಮಾಡಿದೆ

ಹೇ ಹುಡುಗ ನಾನು ಜಿಂಕೆಯಾದೆ



Credits
Writer(s): Arjun Ramu Unknown Composer, Nandini Nanjappa Unknown Composer
Lyrics powered by www.musixmatch.com

Link