Haalalladaru Haaku

ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರಾ
ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಗಿರುವೆ ರಾಘವೇಂದ್ರ

ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರಾ
ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಗಿರುವೆ ರಾಘವೇಂದ್ರ
ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ

ಮುಳ್ಳಲ್ಲಾದರೂ ನೂಕು ಕಲ್ಲಲ್ಲಾದರೂ ನೂಕು ರಾಘವೇಂದ್ರಾ
ಮುಳ್ಳಲ್ಲಾದರೂ ನೂಕು ಕಲ್ಲಲ್ಲಾದರೂ ನೂಕು ರಾಘವೇಂದ್ರಾ
ಮುಳ್ಳಲ್ಲಿ ಮುಳ್ಳಾಗಿ ಕಲ್ಲಲ್ಲಿ ಕಲ್ಲಾಗಿ ಒಂದಾಗಿರುವೆ ರಾಘವೇಂದ್ರ
ಬಿಸಿಲ್ಲಲ್ಲೇ ಒಣಗಿಸು ನೆರಳಲ್ಲೇ ಮಲಗಿಸು ರಾಘವೇಂದ್ರ
ಬಿಸಿಲ್ಲಲ್ಲಿ ಕೆಂಪಾಗಿ ನೆರಳಲ್ಲಿ ತಂಪಾಗಿ ನಗುನಗುತ ಇರುವೆ ರಾಘವೇಂದ್ರ

ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ

ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರಾ
ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರಾ
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು
ನೀನೇ ಹೇಳು ರಾಘವೇಂದ್ರಾ
ಎಲ್ಲಿದ್ದೆರೇನು ನಾ ಹೇಗಿದ್ದರೇನು ನಾ, ರಾಘವೇಂದ್ರ
ನಿನ್ನಲ್ಲಿ ಶರಣಾಗಿ ನೀ ನನ್ನ ಉಸಿರಾಗಿ
ಬಾಳಿದರೆ ಸಾಕು ರಾಘವೇಂದ್ರ

ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇಂದ್ರ
ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ

Credits
Writer(s): Chi. Udayashanker, Upendra Kumar
Lyrics powered by www.musixmatch.com

Link