Prapanchavee Devaroo - 1

ಪ್ರಪಂಚವೇ ದೇವರು ಮಾಡಿರೋ bar-u
ನಾವೆಲ್ಲರೂ ಇಲ್ಲಿ ಬಂಧು ಮಿತ್ರರು

ಪ್ರಪಂಚವೇ ದೇವರು ಮಾಡಿರೋ bar-u
ನಾವೆಲ್ಲರೂ ಇಲ್ಲಿ ಬಂಧು ಮಿತ್ರರು
ಕುಡಿಯೋನೇ ಇಲ್ಲಿ owner-u
ದೇವ್ರೇನೆ ಇಲ್ಲಿ server-u
ಹೆಚ್ಚಾದ್ರೆ ಎಲ್ಲಾ ಬೀಗರು
Rich ಆದ್ರೆ ಭೂಮಿ ಪುತ್ರರು
ಜಾತಿಮತ ಇಲ್ಲ ನಾವಿಲ್ಲಿ ಒಂದೇ ಎಲ್ಲರು

ಪ್ರಪಂಚವೇ ದೇವರು ಮಾಡಿರೋ bar-u
ನಾವೆಲ್ಲರೂ ಇಲ್ಲಿ ಬಂಧು ಮಿತ್ರರು

ದೇವರೆದುರಲೂ ನಿಜವ ನುಡಿಯದ ಜನ
ತೀರ್ಥಕ್ಕೆ ಕುಂತಾಗ ಸತ್ಯ ಸಂಧರು

ಅಲ್ಲಾಡದ ಕಲ್ಲು ಹ್ರುದಯದ ಜನ
ಬಿಕ್ಕಿ ಬಿಕ್ಕಿ ಬಿಕ್ಕಿ ಬಿಕ್ಕಿ ಕರಗಿಹೋದರು

ಬಂದಾಗ ಎಲ್ಲ ಜುಗ್ಗರು
ಎದ್ದಾಗ ದಾನಶೂರರು
Bar ಆಚೆ ಎಲ್ಲ ಅನ್ಯರು
Bar ಅಲ್ಲಿ ಅಣ್ಣ ತಮ್ಮರು
ಜಾತಿಮತ ಇಲ್ಲ ನಾವಿಲ್ಲಿ ಒಂದೇ ಎಲ್ಲರು
ಕಲಾರಸಿಕರು

ಪ್ರಪಂಚವೇ ದೇವರು ಮಾಡಿರೋ bar-u
ನಾವೆಲ್ಲರೂ ಇಲ್ಲಿ ಬಂಧು ಮಿತ್ರರು

ನೂರು ನೋವ್ಗಳು ಮನದ ತುಂಬ ಇದ್ದರು
ಕಂಡೋರ ನೋವಿನಲ್ಲಿ ಪಾಲುದಾರರು

ಮೂರು ದಿನಗಳ ಕಷ್ಟನಷ್ಟ ಜೀವನ
ಬೇಗ ಬೇಗ ಮುಗಿಸಲೆಂದು ಕೂಡಿಕೊಂಡರು

ಕಂಡಿಲ್ಲ ನಾವು ದೇವರು
ಅಂತಾರೆ ಗುಂಡೆ ದೇವರು
ನಾವೆಲ್ಲ ಭಕ್ತವರ್ಯರು
ನಾವೆಲ್ಲ ನಿಮ್ಮ ಭಕ್ತರು
ತಗಾದಯೆಯಿಲ್ಲ ನೀವೇ ನಮ್ಮ ಅನ್ನದಾತರು
ಅಭಿಮಾನಿ ದೇವರು

ಪ್ರಪಂಚವೇ ದೇವರು ಮಾಡಿರೋ bar-u
ನಾವೆಲ್ಲರೂ ಇಲ್ಲಿ ಬಂಧು ಮಿತ್ರರು
ಕುಡಿಯೋನೇ ಇಲ್ಲಿ owner-u
ದೇವ್ರೇನೆ ಇಲ್ಲಿ server-u
ಹೆಚ್ಚಾದ್ರೆ ಎಲ್ಲಾ ಬೀಗರು
Rich ಆದ್ರೆ ಭೂಮಿ ಪುತ್ರರು
ಜಾತಿಮತ ಇಲ್ಲ ನಾವಿಲ್ಲಿ ಒಂದೇ ಎಲ್ಲರು



Credits
Writer(s): Guruprasad, Anoop Seelin
Lyrics powered by www.musixmatch.com

Link