Baare Ninnage Naanu - From "Santheyalli Nintha Kabira"

ಬಾರೆ ನಿನಗೆ ನಾನು ದಾವಣಿಯೊಂದ ನೇಯುವೆನೆ
ಆ ತಾರೆ ಸಾವಿರ ಮಿನುಗಿ ದಾವಣಿಯಂಚಲಿ ಮಿಂಚಲಿವೆ

ಆಹಾ ನನಗೆ ನೀನು ದಾವಣಿಯೊಂದ ನೇಯುವೆಯಾ?
ಆ ತಾರೆ ಸಾವಿರ ಮಿನುಗಿ ದಾವಣಿಯಂಚಲಿ ಮಿಂಚುವವೇ?

ಮಗ್ಗದ ತಾಳಕೆ ಹಿಗ್ಗು ಹೊಳೆಯೇ ಹರಿದಿದೆ
ಮೊಗ್ಗು ತಾ ಅರಳಿರೆ ಘಮವದು ಸುತ್ತಿ ಸುಳಿದು ಮೆರೆದಿದೆ

ಬಾರೆ ನಿನಗೆ ನಾನು ದಾವಣಿಯೊಂದ ನೇಯುವೆನೆ
ಆ ತಾರೆ ಸಾವಿರ ಮಿನುಗಿ ದಾವಣಿಯಂಚಾಲಿ ಮಿಂಚಲಿವೆ

ಆ ದಾರವೇ ಈ ನೇಯ್ಗೆಗೆ ಆಧಾರವು
ಆ ಗಾಳಿಯೇ ಈ ಬಾಳಿನ ಆಧಾರವು
ಪ್ರೇಮದಲಿ ನೋಡು
ಪ್ರೇಮಾವನೇ ನೀಡು
ಪ್ರೇಮದಲೇ ತೇಲು
ಪ್ರೇಮದಲೇ ಬಾಳು

ಮಗ್ಗದ ತಾಳಕೆ ಹಿಗ್ಗು ಹೊಳೆಯೇ ಹರಿದಿದೆ
ಮೊಗ್ಗು ತಾ ಅರಳಿರೆ ಘಮವದು ಸುತ್ತಿ ಸುಳಿದು ಮೆರೆದಿದೆ

ಅಂಬರದ ಆ ರಂಗನು ತಿದ್ದುವೆಯೇನು?
ಬೆಳದಿಂಗಳ ಹೊಂಬಣ್ಣದಿ ಅದ್ದುವೆಯೇನು?
ಸ್ನೇಹದಲಿ ಆಡು
ಸ್ನೇಹದಲೇ ಹಾಡು
ಸ್ನೇಹದಲೇ ಕಾಡು
ಸ್ನೇಹದಲೇ ಕೂಡು

ಮಗ್ಗದ ತಾಳಕೆ ಹಿಗ್ಗು ಹೊಳೆಯೇ ಹರಿದಿದೆ

ಬಾರೆ ನಿನಗೆ ನಾನು ದಾವಣಿಯೊಂದ ನೇಯುವೆನೆ
ಆ ತಾರೆ ಸಾವಿರ ಮಿನುಗಿ ದಾವಣಿಯಂಚಾಲಿ ಮಿಂಚಲಿವೆ



Credits
Writer(s): Ismail Darbar, Gopala Wajapeyi
Lyrics powered by www.musixmatch.com

Link