Enee Kavana

ಏನೀ ಕವನ ನಡುರಾತ್ರಿ ಪಯಣ
ಗಾಳಿಲಿ ತೇಲೊಯ್ತು ಭರವಸೆಯ ನುಡಿಯೊಂದು
ಸುಳಿವಿರದೆ ಸಿಡಿದೋಯ್ತು ವಿರಹದ ಕಿಡಿಯೊಂದು
ನಿನ್ನನ್ನು ಕಳೆದುಕೊಳ್ಳೋ ಕನಸು ಬರುತಿಹುದು
ಆ ಭಯದಿಂದನೆ ಕಣ್ಣು ನಿದಿರೆ ಮರೆತಿಹುದು
ಕಣ್ಣಿರಿನಲ್ಲೂ ಕಿಡಿಯೊಂದು ಹಾರಿ ಬಿಡಬಹುದು
ಏನೀ ಕವನ ನಡುರಾತ್ರಿ ಪಯಣ
ಆಕಾಶ ಭೂಮಿ ಒಂದೇ ಬಣ್ಣ ಎಲ್ಲಾ ರಾತ್ರಿಲೂ
ಪ್ರತಿ ಸರಸ ವಿರಸ ಒಂದೇ ರಭಸ ಎಲ್ಲ ಪ್ರೀತಿಲೂ
ಭಯವಿಲ್ಲದೆ ದಯವಿಲ್ಲದೆ ಗಂಭೀರವಾಗಿ ಕಾಲ ಕಣ್ಣು ಮುಚ್ಚಿ ಕುಳಿತಿದೆ
ಹೃದಯನ ಕೊಟ್ಟು ಕೂಡ ಎದೆಯ ಬಡಿತ ಅಳುತಿದೆ
ಮರಿಬೇಡ ನನ್ನ ಮರೆತಿರಲಾರೆ ನಿನ್ನ
ಈ ಕ್ಷಣವೂ ನೀನು ಬೇಕು ನೀನದೆ ಈ ಪ್ರಾಣ
ನಿನ್ನನು ಕಳೆದುಕೊಳ್ಳೋ ಕನಸು ಬರುತಿಹುದು
ಆ ಭಯದಿಂದನೆ ಕಣ್ಣು ನಿದಿರೆ ಮರೆತಿಹುದು
ಕಣ್ಣಿರಿನಲ್ಲಿ ಕಿಡಿಯೊಂದು ಹಾರಿ ಬಿಡಬಹುದು
ಏನೀ ಕವನ ನಡುರಾತ್ರಿ ಪಯಣ
ಮನಸಿಗಾ ಮನದ ಮಾತು ಹೇಳದೆ ಕೇಳದೆ ಮರೆತೋಯ್ತು
ನನಗಾಗಿ ಇರುವ ಜೀವವು ಈ ಘಳಿಗೆಯಾಲಿ ದೂರಾಯ್ತು
ಹುಡುಗಾಟವೂ ಹುಡುಕಾಟವು ಉಸಿರಾಟ ಇರದ ಗೊಂಬೆ ಗಾಳಿಯ ನೋಡಿ ನಗುವಂತೆ
ಮಳೆಹನಿಯ ಎಣಿಸೂ ಮುಂಚೆ ಬಾನು ಮೊಡವ ತೊರೆದಂತೆ
ಆಗಿದ್ದು ಎಂತೊ ಮುಂದಾಗೋದು ಎಂತೊ
ಒಂದಗೋದು ಎಂತೋ ಜೋಡಿ ಜೀವಗಳು
ನಿನ್ನನ್ನು ಕಳೆದುಕೊಳ್ಳೋ ಕನಸು ಬರುತಿಹುದು
ಆ ಭಯದಿಂದನೆ ಕಣ್ಣು ನಿದಿರೆ ಮರೆತಿಹುದು
ಕಣ್ಣಿರಿನಲ್ಲೂ ಕಿಡಿಯೊಂದು ಹಾರಿ ಬಿಡಬಹುದು
ಏನೀ ಕವನ ನಡುರಾತ್ರಿ ಪಯಣ



Credits
Writer(s): Emil, Kalyan K
Lyrics powered by www.musixmatch.com

Link