Ninna Snehadinda

ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ
ನಿಂಗೆ ಧನ್ಯವಾದ ತುಂಬು ಹೃದಯದಿಂದ
ಮನದಲೊಂದು ಮಧುರ ಮೈತ್ರಿ ಜೀವ ಪಡೆಯುತಿದೆ
ಪ್ರತಿಬಿಂಬವೂ ಪ್ರೇಮದಾ ಹೂವು ಮುಡಿಯುತಿದೆ

ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ
ನಿಂಗೆ ಧನ್ಯವಾದ ತುಂಬು ಹೃದಯದಿಂದ

ತುಂಬ ಸನಿಹದಲಿ
ತುಂಟ ದನಿಯಲ್ಲಿ
ಹುಸಿ ಕೋಪವ ಕಲಿಸು ತುಸು ನಾಚಿಕೆ ಬಿಡಿಸು
ಕುಂತ ಜಾಗದಲಿ
ಕುಂಟು ನೆಪ ಹೇಳಿ
ಕಿರುಬೆರಳ ನೇವರಿಸು ಒಂದೆನಿತು ಆವರಿಸು
ಸರಳವಾದ ಸರಸವನ್ನು ಅಧರ ಬಯಸುತಿದೆ
ನಿನ್ನಿಂದಲೇ ರಸಿಕತೆ ಉದಯವಾಗುತಿದೆ

ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ
ಒಂದೇ ಕಣ್ಣಿನಿಂದ ನಿಂಗೆ ಧನ್ಯವಾದ

सखी एरी आली पिया बिन
सखी एरी आली पिया बिन
सखी, कलन परत मोहे घडी पलछिन बिन
एरी आली पिया बिन

ನೀನೆ ಹೇಳು
ನೀನೆ ಹೇಳು
ಸತಾಯಿಸುವ ಆಸೆಗಳನು ಹೇಗೆ ಹೇಳಲಿ ನಾ
ಅಂದಗಾರ, ನಿನ್ನ ನೋಡಿ
ನಿಧಾನಿಸಲು ಸಾಧ್ಯವಿಲ್ಲ ಏನು ಮಾಡಲಿ ನಾ
ನೀ ನೆನೆಯುವ ಮಳೆಯಲಿ ನನಗು ಪಾಲು ಇದೆ
ನಿನ್ನ ಪ್ರೀತಿಯ ಶೀತವು ಪ್ರಾಣ ಉಳಿಸುತಿದೆ

ನಿನ್ನ ಸ್ನೇಹದಿಂದ ಎಲ್ಲ ಚಂದ ಚಂದ
ಒಳ್ಳೆ ರೀತಿಯಿಂದ ನಿಂಗೆ ಧನ್ಯವಾದ



Credits
Writer(s): Harikrishna V, Bhatt R
Lyrics powered by www.musixmatch.com

Link