Neelimaleya Jeeva Dodeya

ನೀಲಿ ಮಲೆಯ
ಜೀವದೊಡೆಯ
ಮೂಡಣದಲೇ
ಬಂದ ನೋಡಯ್ಯ
ಜ್ಯೋತಿ ಮೂಡಿತು ನೋಡಿರೋ, ಕಣ್ಣು ತುಂಬಿತು ಕೂಗಿರೋ
ಸ್ವಾಮಿ ಅಯ್ಯಪ್ಪ ಶರಣಂ ಅಯ್ಯಪ್ಪ

ನೀಲಿ ಮಲೆಯ
ಜೀವದೊಡೆಯ

ದೇವನ ಜ್ಯೋತಿ ಕಣ್ಣಲೇ ಇರಿಸಿ, ಅಮೃತ ಕುಡಿದ ಸವಿಯನುಭವಿಸು

ಜೀವನ ಜ್ಯೊತಿ ಎದೆಯೊಳಗಿರಿಸಿ, ದೇವನು ನುಡಿದ ನುಡಿಯನು ಸ್ಮರಿಸು
ದರುಶನವಾದರೆ ಮಕರ ಸಂಕ್ರಮಣ
ಮುಕುತಿಯ ನೀಡುವ ಭವಭಯ ಹರಣ
ಆನಂದ ಸಾಧನ ಆ ಜ್ಯೋತಿ
ನೀಲಿ ಮಲೆಯ
ಜೀವದೊಡೆಯ

ನಯನ ಮನೋಹರ ಚಿನ್ಮಯ ರೂಪಿ ಜ್ಯೋತಿಯ ರೂಪದ ಈ ಬಹುರೂಪಿ

ಪಂಚಮನೋಹರ ಕಿನ್ನರ ಮೂರ್ತಿ ಈದಿನ ಬರುವುದು ಪೂರ್ವ ಪ್ರತೀತಿ
ದರುಶನವಾದರೆ ಮಕರ ಸಂಕ್ರಮಣ
ಮುಕುತಿಯ ನೀಡುವ ಭವಭಯ ಹರಣ
ಆನಂದ ಸಾಧನ ಆ ಜ್ಯೋತಿ

ನೀಲಿ ಮಲೆಯ
ಜೀವದೊಡೆಯ
ಮೂಡಣದಲೇ
ಬಂದ ನೋಡಯ್ಯ
ಜ್ಯೋತಿ ಮೂಡಿತು ನೋಡಿರೋ, ಕಣ್ಣು ತುಂಬಿತು ಕೂಗಿರೋ
ಸ್ವಾಮಿ ಅಯ್ಯಪ್ಪ ಶರಣಂ ಅಯ್ಯಪ್ಪ

ನೀಲಿ ಮಲೆಯ
ಜೀವದೊಡೆಯ



Credits
Writer(s): Hamsalekha
Lyrics powered by www.musixmatch.com

Link