Ninna Priyakara Ninna

ನಿನ್ನ ಪ್ರಿಯಕರ ನಿನ್ನ ತೊರೆದು ಹೋಗಿರುವಾಗ
ಕಣ್ಣ ಕಂಬನಿ ಅಷ್ಟೇ, ಕೆನ್ನೆ ಮುತ್ತು
ಕಾಂತನಿಲ್ಲದ ಮೇಲೆ
ಏಕಾಂತದಪ್ಪುಗೆಯಲ್ಲಿ ಕೊಳದ ಕಳವಳ ಅದರ ಅಲೆಯೊಳಿತ್ತು
ಅಲೆಯೊಳಿತ್ತು
ಅಲೆಯೊಳಿತ್ತು
ನಿನ್ನ ಪ್ರಿಯಕರ ನಿನ್ನ

ಬಾನ ಹೂ ಮಂಚದಲಿ ಚಂದ್ರಮನು ಏಕಾಂಗಿ
ಏಕಾಂಗಿ
ಬಾನ ಹೂ
ಬಾನ ಹೂ ಮಂಚದಲಿ ಚಂದ್ರಮನು ಏಕಾಂಗಿ
ಸುಪ್ಪತ್ತಿಗೆಯ ಹೊತ್ತು ನಿನ್ನ ಕೂಡೆ
ಗಾಳಿಗಾಡುವ ದೀಪ ಗೋಡೆಯಲಿ ನೆರಳುಗಳು
ಗಾಳಿಗಾಡುವ ದೀಪ ಗೋಡೆಯಲಿ ನೆರಳುಗಳು
ಅಗರು ಧೂಪದ ಕನಸು ನಿನ್ನ ಕಾಡೇ
ನಿನ್ನ ಕಾಡೇ
ನಿನ್ನ ಕಾಡೇ

ನಿನ್ನ ಪ್ರಿಯಕರ ನಿನ್ನ ತೊರೆದು ಹೋಗಿರುವಾಗ

ಹೂವ ತೊರೆದೋಡಿತೇ ಕಂಪಿನಂಥ ಕರಣ
ಹೂವ ತೊರೆದೋಡಿತೇ ಕಂಪಿನಂಥ ಕರಣ
ಹೂವ ತೊರೆದೋಡಿತೇ ಕಂಪಿನಂಥ ಕರಣ
ದೀಪ್ತಿ ಅಗಲಿತೇ ಅಯ್ಯೋ ದೀಪ್ತಿಯನ್ನ
ಮುಳ್ಳು ಬೆರಳಲಿ ಹಿಡಿದು ಮಲ್ಲಿಗೆಯ ಮಾಲೆಯನು
ಮುಳ್ಳು ಬೆರಳಲಿ ಹಿಡಿದು ಮಲ್ಲಿಗೆಯ ಮಾಲೆಯನು
ಪ್ರೀತಿವರಿಸಿತೇ ಹೀಗೆ ಮುಗುದೆ ನಿನ್ನ
ಮುಗುದೆ ನಿನ್ನ
ಮುಗುದೆ ನಿನ್ನ

ನಿನ್ನ ಪ್ರಿಯಕರ ನಿನ್ನ ತೊರೆದು ಹೋಗಿರುವಾಗ
ಕಣ್ಣ ಕಂಬನಿ ಅಷ್ಟೇ ಕೆನ್ನೆ ಮುತ್ತು
ಕಾಂತನಿಲ್ಲದ ಮೇಲೆ
ಏಕಾಂತದಪ್ಪುಗೆಯಲಿ ಕೊಳದ ಕಳವಳ ಅದರ ಅಲೆಯೊಳಿತ್ತು
ನಿನ್ನ ಪ್ರಿಯಕರ ನಿನ್ನ



Credits
Writer(s): C Aswath, Dr. H.s. Venkatesh Murthy
Lyrics powered by www.musixmatch.com

Link