Edurali Ninthu

ಎದುರಲಿ ನಿಂತು ಹೃದಯದ ಮಾತು ಹೇಳಿಬಿಡಲೇನು
ನಿನ್ನ ನನಗಾಗಿ ಸವಿ ನಯವಾಗಿ ಕೇಳಿಬಿಡಲೇನು
ನಿನ್ನಿಂದ ತಾನೇ ನನ್ನೊಳಗೆ ಮುದ್ದಾದ ಪ್ರೀತಿ ಸೋನೆ
ನೀನಿಂದು ನನ್ನ ಜೊತೆ ಇರಲು ಬೇರೆಲ್ಲ ನಂಗೆ ಸುಮ್ನೆ
ಎದುರಲಿ ನಿಂತು ಹೃದಯದ ಮಾತು ಹೇಳಿಬಿಡಲೇನು
ನಿಜ ಹೇಳಿಬಿಡಲೇನು

ಕುಂತರು ನಿಂತರೂ
ನಿನ್ನದೆ ಮಂಪರು
ಎಲ್ಲಿ ನೀ ಹೋದರೂ
ಅಲ್ಲಿ ನಾ ಹಾಜರು
ಖಾತರಿ ಆಗಿದೆ
ನನ್ನೆದೆ ನಿನ್ನದೆ
ಹೇಳಲು ಆಗದೆ
ಮೌನ ಆವರಿಸಿದೆ
ಪ್ರೀತಿಯ ಮೊದಲಿದು
ಮಾತು ಬರದಾಗಿದೆ
ತಿಳಿಸಲಿ ಹೇಗೆ ನಾ
ತಿಳಿಸು ಓ ದೇವರೆ

ಎದುರಲಿ ನಿಂತು ಹೃದಯದ ಮಾತು ಹೇಳಿಬಿಡಲೇನು
ನಿಜ ಹೇಳಿಬಿಡಲೇನು

ಓ ಕಣ್ಣಿನ ಭಾಷೆಯು
ಓದಲು ಬಾರದೆ
ಹೇಳಲೇ ಬೇಕೇನು
ಅರ್ಥವು ಆಗದೆ
ಕಾಡುವೆ ಒಂಥರ
ಹೃದಯ ಹಾಡೋ ಥರ
ಮಗುವು ನಾನಾಗುವೆ
ನೀನಿರೆ ಹತ್ತಿರ
ಕಾಯುವ ಕನಸಿದೆ
ಕಾಯೋ ಮನಸಿಲ್ಲವೇ
ತಿಳಿಸಲಿ ಹೇಗೆ ನಾ
ತಿಳಿಸು ಓ ದೇವರೆ

ಎದುರಲಿ ನಿಂತು ಹೃದಯದ ಮಾತು ಹೇಳಿಬಿಡಲೇನು
ನಿನ್ನ ನನಗಾಗಿ ಸವಿ ನಯವಾಗಿ ಕೇಳಿಬಿಡಲೇನು
ನಿನ್ನಿಂದ ತಾನೇ ನನ್ನೊಳಗೆ ಮುದ್ದಾದ ಪ್ರೀತಿ ಸೋನೆ
ನೀನಿಂದು ನನ್ನ ಜೊತೆ ಇರಲು ಬೇರೆಲ್ಲ ನಂಗೆ ಸುಮ್ನೆ

ಎದುರಲಿ ನಿಂತು ಹೃದಯದ ಮಾತು ಹೇಳಿಬಿಡಲೇನು
ನಿಜ
ಹೇಳಿಬಿಡಲೇನು



Credits
Writer(s): Songa Pulliah Nagaraju, Ramnarayan
Lyrics powered by www.musixmatch.com

Link