Midiva Ninna - From "Rajaadaani"

ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ
ದಿನವೂ ನನ್ನ ಕನಸಿನಲ್ಲಿ ಬರುವೆಯಾ ಖಾತರಿ
ಸರಿಯಾಗಿ ಕಣ್ಣಲ್ಲಿ ಬೀಳುತಾ
ನವಿರಾಗಿ ಏನನ್ನು ಹೇಳುತಾ
ನನ್ನನು ಅಪಹರಿಸಿದೆ ನೀನು

ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ

(ಕಣ್ಣಾ ಮುಚ್ಛೇ ಕಾಡೇ ಗೂಡೇ
ಉಪ್ಪಿನ ಮೂಟೆ ಉರುಳೇ ಹೋಯ್ತು
ನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೆ ಬಿಟ್ಟೆ
ಕಣ್ಣಾ ಮುಚ್ಛೇ ಕಾಡೇ ಗೂಡೇ
ಉಪ್ಪಿನ ಮೂಟೆ ಉರುಳೇ ಹೋಯ್ತು
ನಮ್ಮ ಹಕ್ಕಿ ನಿಮ್ಮ ಹಕ್ಕಿ ಬಿಟ್ಟೆ ಬಿಟ್ಟೆ)

ಇಲ್ಲೇ ಎಲ್ಲೋ ನೀನು ಅವಿತಿರುವಂತೆ ಖುಷಿಪಡುತಿದೆ ಮೈಮನ
ಚಂದ ಚಂದ ನೂರು ಕರೆಯನು ಮಾಡಿ ಪಿಸುಗುಡುತಿದೆ ಯೌವ್ವನ
ಋತುಮಾನಕೂ ಬಣ್ಣ ಬಂತು ಇಡೀ ದಿನ ಕಾಯುತ
ಅತಿಯಾಸೆಗೂ ಭಾಷೆ ಬಂತು ಇನಿ ದನಿ ಕೇಳುತ
ಚೆಲುವಾಗಿ ಕಣ್ಣಲ್ಲೇ ಆಡಿಸಿ
ನೆನಪಾಗಿ ನಿಂತಲ್ಲೇ ಪೀಡಿಸಿ
ನನ್ನನು ಅಪಹರಿಸಿದೆ ನೀನು

ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ
ದಿನವೂ ನನ್ನ ಕನಸಿನಲ್ಲಿ ಬರುವೆಯಾ ಖಾತರಿ

ಒಂದೇ ಒಂದು ಮಾತು ನುಡಿಯದೆ ನೀನು, ಕನವರಿಕೆಯ ಆಲಿಸು
ಎಂದೂ ಕೂಡ ನಿನ್ನ ಜೊತೆ ಇರುವಂತೆ ಕನಸನು ದಯಪಾಲಿಸು
ಅಪರೂಪದ ನಿನ್ನ ರೂಪ ಸಮೀಪವೆ ಕಾಡಿದೆ
ದಿನ ರಾತ್ರಿಯೂ ಇನ್ನು ಈಗ ಇದೆ ಕಥೆಯಾಗಿದೆ
ಅಂಗೈಲಿ ಬೆರಳಿಂದ ಗೀರುತಾ
ಮುದ್ದಾದ ಬೆಳಕನ್ನು ಬೀರುತಾ
ನನ್ನನು ಅಪಹರಿಸಿದೆ, ನೀನು

ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ
ದಿನವೂ ನನ್ನ ಕನಸಿನಲ್ಲಿ ಬರುವೆಯಾ ಖಾತರಿ



Credits
Writer(s): S A Lokesh Kumar, Jayant Kaikini
Lyrics powered by www.musixmatch.com

Link