Gandaka

ಗಂಡಕವನ್ನು ಕಂದಕದಲ್ಲಿ ಕಂಡ ಕಥೆ ಬೇಕಾ
ಕಂಟಕ ಬಂದ ಮಂಡೂಕದ ಕರಂಡಕವೇ ಬೇಕಾ
ಗಂಡಕವನ್ನು ಕಂದಕದಲ್ಲಿ ಕಂಡ ಕಥೆ ಬೇಕಾ
ಕಂಟಕ ಬಂದ ಮಂಡೂಕದ ಕರಂಡಕವೇ ಬೇಕಾ

ಬೊಂಕು ಡೊಂಕದ ಬಿಂಕದ ಕುದುರೆ
ಹಿಂದೆ ಕೊಂಕಣ ಮುಂಗಡೆ ಚದುರೆ
ಅಂಕು ಡೊಂಕಿದೆ ತೆಂಕಣ ಹಾರು
ಟಾಂಗು ಬಿಗಿದು ಚಂಗನೆ ಎದುರೇ
ನೀರು ಕುಡಿದ ಶೀಷೆಯ ಮೇಲೆ
ಇತ್ತು ವಿಜಯ ಮಲ್ಯನ ಮುದುರೆ
ಭದ್ರೆಯ ದಡದಲಿ ನಿದ್ರೆಯ ನಡುವಲಿ ಎದ್ದವನಂತೆ ಆಗಿದೆ
ಗಾಡಿಯು ನಿಂತರೂ ದಾರಿಯೇ ಮುಂದೆ ಸಾಗಿದೆ

ಹೊ, ಅಖಾಡ ಪರಪಂಚ ದಿನವೆಲ್ಲವೂ ಕಾದಾಟ
ಈ ಆಟ ಸುಖಕಾಗಿ ಹುಡುಕಾಟ
ಗರಡಿಯೊಳಗೆ ಬರಿ ಕೊರಡುಂಟು ಏಕೆ ಬೇಕು ಒದೆಗೊರಡು?
ಉಜ್ಜುಗೊರಡಿಂದ ಕೆರೆತೆಗೆಯೋ ಲೋಕ ಕೊರೆದ ಪ್ರತಿ ಕರಡು
(ಶಭಾಷ್)
ಕಹಿಯೇ ಇರದ ಬಾಳೇ ಬರಡು
ಸಿಹಿಯ ಬೇಡೋ ಲೋಕ ಕುರುಡು
ಮುಂದೆ ಎರಡು ಬಾಳೆಲೆ ಹರಡು ಸಿಹಿಯು ಕಹಿಯು ಬೆರೆಯಲಿ
(ವಾರೆವ್ಹಾ)
ಜಂಭವೇ ತುಂಬಿದ ಹುಂಬನ ಕಣ್ಣು ತೆರೆಯಲಿ

ನಬ್ಬಂಟಿಯಾ ಸವಾರಯ್ಯ
ಆತುರಗೆಟ್ಟ ಆಂಜನೇಯ ಹೇಳು
ಮದವೇರಿದ ಮದನಾರಿಯ ಕರೆದೊಯ್ಯುವ ದಾರಿಯಾ?

ಸುಳ್ಯ ದಾಟಿ ಸಂಪಾಜೆ
ಮಡಿಕೇರೀಲಿ ತಂಪಾದೆ
ಸುಂಟಿಕೊಪ್ಪ ಅಲೆದಾಡಿ
ಬೈಲುಕುಪ್ಪೆ ಕೆಂಪಾದೆ
ಕುಕ್ಕಡದೆದುರು ಎಕ್ಕಡ ತೆಗೆದು ಪಕ್ಕದ ಊರಿಗೆ ಚಲಿಸಿರುವೆ
ದಕ್ಕಡ ಇಲ್ಲದೇ ದಿಕ್ಕೆಲ್ಲಾ ಬೆಳಗಿರುವೆ
ನಿನ್ನ ನಗುವೇ ತಾರೆಯ ಮಿನುಗು
ನೀನು ಸೂಸೋ ಹೂವಿನ ಪುನುಗು
ಗುಡುಗುವ ಸಿಡಿಲೊಂದು ಬಡಿಯುವ ರಭಸಕೆ
ಮುಳುಗುವ ಹಡಗಂತಾದೆನು



Credits
Writer(s): Anup Bhandari
Lyrics powered by www.musixmatch.com

Link