Kannadakkagi Ondannu Otti

ಕನ್ನಡ ತಾಯಿ ಮಕ್ಳಾಗಿ ಹುಟ್ಟಿ
ಕನ್ನಡಕ್ಕಾಗಿ ಒಂದನ್ನು ಒತ್ತಿ

ಕನ್ನಡ ತಾಯಿ ಮಕ್ಳಾಗಿ ಹುಟ್ಟಿ
ಕನ್ನಡಕ್ಕಾಗಿ ಒಂದನ್ನು ಒತ್ತಿ

ಉಳಿಯದು ಭಾಷೆ ಅನ್ನುವರೆಲ್ಲ
ಉಳಿಸುವ ಆಸೆ ನಿಮಗ್ಯಾಕಿಲ್ಲ
ಆಗಿದ್ದು ಆಗ್ಲಿ ನೋಡೇಬಿಡೋಣ
ಒತ್ರಪ್ಪೋ ಒತ್ತಿ
ಕನ್ನಡಕ್ಕಾಗಿ ಒಂದನ್ನು ಒತ್ತಿ
ಕನ್ನಡ ತಾಯಿ ಮಕ್ಳಾಗಿ ಹುಟ್ಟಿ

ಆದಿ ಕವಿ ಪಂಪ ಅಂದ ಕುರಿತೋದದೆ
ಈವತ್ತಿನ ಮಂದೀಗದು ಮರೆತೋಗಿದೆ
ಹಳೆದಿದ್ರೇನೆ ಹೊಸ್ಸಾದು ಉಳಿಯೋದು
ಒಂದನ್ನ ಒತ್ತಿದ್ರೆ ನಿಮಿಗೆನೇ ತಿಳಿಬೋದು
ಹೊಟ್ಟೇಲಿ ಇದ್ದಾಗ್ಲೇ ಕನ್ನಡ ಕಲಿತೋರು
ಮಾತು ಮಾತಿಗೆ ಕುಸ್ ಕುಸ್ ಅನ್ನಬಾರ್ದು
ನಮ್ಮ engalis-u ನಿಮಗಿಂತ strong-ಎ
Bar-u ಬಾಗಿಲಲ್ಲಿ ಸಿಕ್ಕಬೇಡಿ ನಮ್ಗೆ

ಆಗಿದ್ದು ಆಗ್ಲಿ ನೋಡೇಬಿಡೋಣ
ಒತ್ರಪ್ಪೋ ಒತ್ತಿ
ಕನ್ನಡಕ್ಕಾಗಿ ಒಂದನ್ನು ಒತ್ತಿ
ಕನ್ನಡ ತಾಯಿ ಮಕ್ಳಾಗಿ ಹುಟ್ಟಿ

ಅ ಆ ಇ ಈ ಐರಾವತ ಮೊದಲು ಬರ್ಲಿ
ಬ್ಯಾರೆ ಭಾಸೆ luggage auto ಆಮೇಲಿರ್ಲಿ
ತಾಯಿ ಬಿಟ್ಟರೆ ಕನ್ನಡ ಉಳಿಯಲ್ಲ
ಅಂತ ಅನ್ನೋರು ದಯಮಾಡಿ ಬಾಯಿಮುಚ್ಚಿ
ಅಮ್ಮ ಕಲಿಸಿದ್ದು ಎಂದೆಂದೂ ಉಳಿಯುತ್ತೆ
ಸಾಯೋ ಮಾತಾಡ್ಬಾರ್ದಪ್ಪಾ ಛಿ, ಛಿ, ಛಿ
ನಮ್ಮ ನಮ್ಮ ಪೀಪಿ ಊದಿದರೆ ನಾವು
ಬರುವುದೇ ಇಲ್ಲ ಕನ್ನಡಕ್ಕೆ ಸಾವು

ಆಗಿದ್ದು ಆಗ್ಲಿ ನೋಡೇಬಿಡೋಣ
ಒತ್ರಪ್ಪೋ ಒತ್ತಿ
ಕನ್ನಡಕ್ಕಾಗಿ ಒಂದನ್ನು ಒತ್ತಿ
ಕನ್ನಡ ತಾಯಿ ಮಕ್ಳಾಗಿ ಹುಟ್ಟಿ

ಕನ್ನಡ ತಾಯಿ ಮಕ್ಳಾಗಿ ಹುಟ್ಟಿ
ಕನ್ನಡಕ್ಕಾಗಿ ಒಂದನ್ನು ಒತ್ತಿ (ಒಂದನ್ನು ಒತ್ತಿ, ಒಂದನ್ನು ಒತ್ತಿ, ಒಂದನ್ನು ಒತ್ತಿ)



Credits
Writer(s): Arjun Janya, Yogaraj Bhat
Lyrics powered by www.musixmatch.com

Link