Nannavalu Nannavalu (From "Nannavalu Nannavalu")

ನನ್ನವಳು ನನ್ನವಳು ನನ್ನೆದೆಯ ಕಣ್ಣಿವಳು
ನನ್ನವಳು ನನ್ನವಳು ನನ್ನುಸಿರ ಹೆಣ್ಣಿವಳು
ಅಪರಂಜಿ ಅಪರಂಜಿ ನೀ ನನ್ನ ಮನಸು ಕಣೇ
ಗುಲಗಂಜಿ ಮಾತಿನಲೂ ಸಿಹಿಗಂಜಿ ಕೊಡುವೆ ಕಣೇ
ನೀನೆಂದ್ರೆ ಪ್ರೀತಿ ಕಣೇ
ನೀನೆಂದ್ರೆ ಪ್ರೀತಿ ಕಣೇ
ನನ್ನವಳು ನನ್ನವಳು ನನ್ನೆದೆಯ ಕಣ್ಣಿವಳು
ನನ್ನವಳು ನನ್ನವಳು ನನ್ನುಸಿರ ಹೆಣ್ಣಿವಳು

ಕೋಪ ಎಂಬುದು ಬೆಂಕಿ ಅಂಟಿಕೊಂಡರೆ ಖಾಸಿ
ತಾಳ್ಮೆ ಅನ್ನೋ ತಂಗಾಳಿ ತುಂಬಿಕೊಂಡರೆ ವಾಸಿ

ನಾಳೆಗಾಗಿ ನಿನ್ನೆಗಳ ಮರೆತು ಹೋದರೆ ಘಾಸಿ
ದ್ವೇಷದಲ್ಲೂ ಪ್ರೀತಿಯನ್ನು ಕಂಡುಕೊಂಡರೆ ವಾಸಿ
ಜೀವನವೇ ನೀನೆ ಕಣೆ
ಜೀವದಲೂ ನೀನೆ ಕಣೇ
ನೀನೆಂದ್ರೆ ಪ್ರೀತಿ ಕಣೇ
ನೀನೆಂದ್ರೆ ಪ್ರೀತಿ ಕಣೇ

ನನ್ನವಳು ನನ್ನವಳು ನನ್ನೆದೆಯ ಕಣ್ಣಿವಳು
ನನ್ನವಳು ನನ್ನವಳು ನನ್ನುಸಿರ ಹೆಣ್ಣಿವಳು

ಗಂಡ ಹೆಂಡತಿ ನಂಟು ಬಿಡಿಸದಂಥ ಬ್ರಹ್ಮಗಂಟು
ಎಷ್ಟು ಜನ್ಮ ಬಂದರೂನು ಮರೆಯದಂಥ ಪ್ರೀತಿಯುಂಟು

ಭೂಮಿಯಲ್ಲಿ ಪ್ರೀತಿ ಬಿಟ್ಟು ಬೇರೆ ದೇವರೆಲ್ಲಿ ಉಂಟು
ದೇವರಾಣೆ ನನ್ನ ಪ್ರೀತಿ ನಿನ್ನ ಬಿಟ್ಟು ಎಲ್ಲಿ ಉಂಟು
ಭರವಸೆಯೇ ನೀನೆ ಕಣೇ
ಭಾಗ್ಯವತಿ ನೀನೆ ಕಣೇ
ನೀ ನನ್ನ ಪ್ರೀತಿ ಕಣೇ
ನೀ ನನ್ನ ಪ್ರೀತಿ ಕಣೇ

ನನ್ನವಳು ನನ್ನವಳು ನನ್ನೆದೆಯ ಕಣ್ಣಿವಳು
ನನ್ನವಳು ನನ್ನವಳು ನನ್ನುಸಿರ ಹೆಣ್ಣಿವಳು
ಅಪರಂಜಿ ಅಪರಂಜಿ ನೀ ನನ್ನ ಮನಸು ಕಣೇ
ಗುಲಗಂಜಿ ಮಾತಿನಲೂ ಸಿಹಿಗಂಜಿ ಕೊಡುವೆ ಕಣೇ
ನೀನೆಂದ್ರೆ ಪ್ರೀತಿ ಕಣೇ
ನೀನೆಂದ್ರೆ ಪ್ರೀತಿ ಕಣೇ



Credits
Writer(s): K Kalyan, Bharadwaj
Lyrics powered by www.musixmatch.com

Link