Ekangi Haadinali - From "Raju Kannada Medium"

ಏಕಾಂಗಿ ಹಾಡಿನಲಿ ಹಿತವಾದ ನೋವು
ಕೈ ಮುಗಿದು ಬೇಡಿದರು ಬರದಲ್ಲ ಸಾವು
ಋಣವಿರದ ಅನುರಾಗ ಹೆಣವಾಗಿ ಹೋಯ್ತು
ಕನಸುಗಳ ಗೋರಿಯಲಿ ಬದುಕೇ ಕೊನೆಯಾಯ್ತು

ಏಕಾಂಗಿ ಹಾಡಿನಲಿ ಹಿತವಾದ ನೋವು
ಕೈ ಮುಗಿದು ಬೇಡಿದರು ಬರದಲ್ಲ ಸಾವು

ಕಂಬನಿಯಲೇ ಜಾರುತಿದೆ ಒಂದೊಂದೇ ಕನಸು
ನೋವುಂಡು ಬದುಕುವುದು ಓ ವಿಧಿಯೇ ಕಲಿಸು
ಮುಗಿದ ಜಾತ್ರೆಯಲಿ ನಾ ಉಸಿರಿರದ ಗೊಂಬೆ
ಪ್ರತಿ ಪ್ರೇಮಿಯ ಕೋನೆಗಾಲಕೆ ಒಲವೆಂಬುದೆ ಶಿಲುಬೆ
ಋಣವಿರದ ಅನುರಾಗ ಹೆಣವಾಗಿ ಹೋಯ್ತು
ಕನಸುಗಳ ಗೋರಿಯಲಿ ಬದುಕೇ ಕೊನೆಯಾಯ್ತು

ಏಕಾಂಗಿ ಹಾಡಿನಲಿ ಹಿತವಾದ ನೋವು
ಕೈ ಮುಗಿದು ಬೇಡಿದರು ಬರದಲ್ಲ ಸಾವು



Credits
Writer(s): Hrudaya Shiva, Kiran Ravindranath
Lyrics powered by www.musixmatch.com

Link