O Chandamama (From "Muniya")

ಓ, ಚಂದಮಾಮ, ನೀನೊಮ್ಮೆ ಹಾಡು
ಈ ಹಗಲಿನಲ್ಲೂ ಹುಣ್ಣಿಮೆಯ ಬೆಳಕು ನೀಡು
ಗಾಳಿಯಲ್ಲೂ
ಗಂಧದಲ್ಲೂ
ಅಲೆ ಅಲೆಯು ಕಂಪು ತುಂಬಿದೆ
ಮೈ ಮನಕೆ ತಂಪು ನೀಡಿದೆ
ಭೂಮಿ ಎಲ್ಲೋ?
ಭಾನು ಎಲ್ಲೋ?
ಜೊತೆಯಲ್ಲೇ ಸ್ನೇಹ ಸಾಗಿದೆ
ದಿನದಿನವೂ ಹಿತವ ತಂದಿದೆ

ಓ, ಚಂದಮಾಮ
ನೀನೊಮ್ಮೆ ಹಾಡು
ಈ ಹಗಲಿನಲ್ಲೂ
ಹುಣ್ಣಿಮೆಯ ಬೆಳಕು ನೀಡು

ಹಿಗ್ಗಿನಲ್ಲೂ, ಸಿಗ್ಗಿನಲ್ಲೂ
ಚಿಗುರೆಲೆಯ ತಂಗಾಳಿಯಾಗಿ, ನೀ ಬಂದೆ ಝೇಂಕಾರವಾಗಿ
ಕಂಡ ಕಂಡಲ್ಲೇ
ಕಲ್ಲು ಹೂವಾಗಿ,
ನಿಂತ ನಿಂತಲ್ಲೇ
ಮೋಡ ಮಳೆಯಾಗಿ
ಕಣ್ಣಮುಚ್ಚೆ ಕಾಡೆಗೂಡೆ ಆಡಬೇಡವೇ
ಎಲ್ಲೇ ಇದ್ದರೂನು ನಾನು ನಿನ್ನ ಹುಡುಕುವೆ
ಎರಡು ದೇಹ ಇದ್ದರೂ ಜೀವ ಒಂದೇ ಅಲ್ಲವೇ?
ಕೋಟಿ ಕಷ್ಟ ಬಂದರೂ ಸುಖವ ನಿನಗೆ ನೀಡುವೆ

ಗಾಳಿಯಲ್ಲೂ
(ಗಾಳಿಯಲ್ಲೂ)
ಗಂಧದಲ್ಲೂ
(ಗಂಧದಲ್ಲೂ)
ಅಲೆ ಅಲೆಯು ಕಂಪು ತುಂಬಿದೆ
ಮೈ ಮನಕೆ ತಂಪು ನೀಡಿದೆ

ಹೆಜ್ಜೆಯಲ್ಲೂ, ಗೆಜ್ಜೆಯಲ್ಲೂ
ಘಲ್ ಎನುವ ನಾದ ಎಂಥ ಚಂದ, ನೀನಾಡೋ ಮಾತಿನ್ನು ಚಂದ
ನೋಡಿ ನಕ್ಕಾವೆ
ಬಾನ ಬೆಳ್ಳಕ್ಕಿ
ನಾಚಿ ನಿಂತಾವೆ
ಬೆಳ್ಳಿ ಹಾಲಕ್ಕಿ
ಜೋಡಿ ಹಕ್ಕಿಯಂತೆ ನಾವು ಹಾರಿ ಹೋಗುವ
ಬಾನಿನಲ್ಲಿ ಸೇರಿಕೊಂಡು ತಾರೆಯಾಗುವ
ಕಣ್ಣ ರೆಪ್ಪೆಯಂತೆ ನಾ ನಿನ್ನ ದಿನವೂ ಕಾಯುವೆ
ಬೆಳಕೇ ಇರದ ದಾರಿಲಿ ದೀಪದಂತೆ ಬೆಳಗುವೆ

ಗಾಳಿಯಲ್ಲೂ
ಗಾಳಿಯಲ್ಲೂ
ಗಂಧದಲ್ಲೂ
ಗಂಧದಲ್ಲೂ
ಅಲೆ ಅಲೆಯು ಕಂಪು ತುಂಬಿದೆ
ಮೈ ಮನಕೆ ತಂಪು ನೀಡಿದೆ

ಓ, ಚಂದಮಾಮ, ನೀನೊಮ್ಮೆ ಹಾಡು
ಈ ಹಗಲಿನಲ್ಲೂ ಹುಣ್ಣಿಮೆಯ ಬೆಳಕು ನೀಡು



Credits
Writer(s): Abhimann Roy G, Jamakhandi Shivu
Lyrics powered by www.musixmatch.com

Link