Deepave Ninna

ದೀಪವೇ ನಿನ್ನಾ ಕಣ್ಣು
ಅಪರೂಪವೇ ಇಂಥಾ ಹೆಣ್ಣು
ನನ ಬಾಳದಾರಿಗೆ ಜೊತೆಯಾದೆ ನೀ
ಮರುಜನ್ಮದಲ್ಲಿಯೂ ಸಖಿಯಾಗು ನೀ
ಪ್ರೀತಿಗೆ ಸಮ್ಮತಿ ಹೇಳಿದಾ ಶ್ರೀಮತಿ
ಹೇಳಲೇ ಯಾರಿಗೂ ಹೇಳದಾ ಸಂಗತಿ
ನಿನ್ನ ಬಿಟ್ಟು ನನ್ನ ಜೀವನಾ
ಕಂಪು ಇರದ ಖಾಲಿ ಚಂದನ

ದೀಪವೇ ನಿನ್ನಾ ಕಣ್ಣು
ಅಪರೂಪವೇ ಇಂಥಾ ಹೆಣ್ಣು

ವಿವರಣೆಗೆ ಸಿಗದ ಧ್ಯಾನ
ವಿನಿಮಯವೂ ಮಾತು ಮೌನ
ಅನುರಾಗ ಎಂಬಾ ಮಾಯದ ಚೇತನ
ಇರುವಾಗ ಸಾಂಗತ್ಯ ಸೊಗಸಂತೆ ದಾಂಪತ್ಯ
ಸೇರಲೇನು ಮೂರು ಗಂಟು ಹಾಲಧಾರೆ ಶಾಸ್ತ್ರವು
ಎರಡು ಜೀವ ಹಾಯಾಗಿ ಹರಟೆ ಹೊಡೆಯೋದು
ಇವರ ಕೆಲಸ ಹೀಗೇನೆ ಪ್ರೀತಿ ಮಾಡೋದು

ದೀಪವೇ ನಿನ್ನಾ ಕಣ್ಣು
ನನಗಾಗಿಯೇ ಬಂದಾ ಹೆಣ್ಣು

ಕನಸುಗಳ ಮಳಿಗೆಯ ತೆರೆದೆ
ನಿನಗೆಲ್ಲವೂ ಉಚಿತಾ ಎಂದೆ
ಪಡೆದಂಥ ನಾನೆ ಧನ್ಯನು, ಮಾನ್ಯನು
ಅಭಿಮಾನಿ ನಾ ನಿನಗೆ
ಬಹುಮಾನ ನೀ ನನಗೆ
ಜೀವ ಹೋದ ಮೇಲು ನಮ್ಮ ಪ್ರೀತಿಯೊಂದೇ ಶಾಶ್ವತ
ರುಜುವಾತು ಬೇರೆಬೇಕೆ ಪ್ರೀತಿ ಹೇಳೋಕೆ
ಲೋಕಕೆಲ್ಲ ನಾವೇ ಸಾಕು ಪ್ರೀತಿ ಹಂಚೋಕೆ

ದೀಪವೇ ನಿನ್ನಾ ಕಣ್ಣು
ಅಪರೂಪವೇ ಇಂಥಾ ಹೆಣ್ಣು



Credits
Writer(s): V Nagendra Prasad, Veer Samarth
Lyrics powered by www.musixmatch.com

Link