Love Aagoythe Nin Myale (From "The Villain")

ಐತ ಲಕ್ಕಡಿ ಪಕ್ಕಡಿ ಲಕ್ಕಡಿ ಜುಮ್ಮ
ಕದ್ದು ಹೊತ್ಕೊಂಡ್ ಒಯ್ತಾನ್ ನೋಡು, ಗುಮ್ಮ

(ಆಂಜನೇಯ, ಬಾರೋ ಎಲ್ಲಿದ್ದಿಯಾ
ಗದೆಯ ತಂದು ಅವ್ನ ಹೊಡೆದಾಕಯ್ಯ)

ಕಳ್ಳೆಪುರಿಯನ್ನು ಕದ್ದು ತಂದಿರುವೆ ಬಾರೋ
ಬಾರೋ... ಬಾರೋ

Roadಅಲ್ ನಿಂತು ಕಾಯ್ಲೂ ಇಲ್ಲ
ಹಿಂದೆ ಮುಂದೆ ಸುತ್ಲೂ ಇಲ್ಲ
ಮಾತಗ್ sideಗ್ ಕರಿಲೇ ಇಲ್ವಲ್ಲೇ
ಮುಂದುಕ್ ಹೇಳ್ಳೇ

ಅವ್ವುನ್ ಕೇಳ್ಲೂ ಇಲ್ಲ
ಅಪ್ಪುನ್ ಹೇಳ್ಲೂ ಇಲ್ಲ
Love ಆಗೋಯ್ತೆ ನಿನ್ಮ್ಯಾಲೆ
Love ಆಗೋಯ್ತೆ ನಿನ್ಮ್ಯಾಲೆ

(ಕಳ್ಳ ಕೃಷ್ಣ, ಗೋಪಿ ಕೃಷ್ಣ, ರಾಧೆ ಕೃಷ್ಣ ಹೋಯ್
ಬೆಣ್ಣೆ ಕದ್ದ ಮುದ್ದು ಕೃಷ್ಣ ರಾಧೆ ಕೃಷ್ಣ ಹೋಯ್
ಗೋಪಿಕೆರ ಸೀರೆ ಕದ್ದು ದ್ರೌಪದಿಗೆ ದಾನ ಕೊಟ್ಟ)

ನಾ ಪಿಳ್ಳಂಗೋವಿ ಊದ್ಲೇ ಇಲ್ಲ
(PT madam ಕಲ್ಸ್ಲಿಲ್ಲ
ಅದಕೆ ಅವ್ಳು ಊದ್ಲಿಲ್ಲ)
ನೀನು ಪಾರಿವಾಳ ಕಳ್ಸ್ಲೂ ಇಲ್ಲ
(Facebook, whatsapp ಇತ್ತಲ್ಲ
ಅದಕೆ ಅವಳು ಕಳ್ಸ್ಲಿಲ್ಲ)

Love letter ಅಂತೂ ನಂಗೆ ನೀನು ಬರ್ದು ಇಲ್ಲ
ರಾಧೆ ಬಂದು ನಿನ್ನ ಬಗ್ಗೆ ಹೇಳ್ಲೂ ಇಲ್ಲ
ಗುಡಿಯ ಕಟ್ಟಿ ಯಾರೂ ಪೂಜಿಸ್ಲಿಲ್ಲ
ನಮಿಬ್ಬರ ಪ್ರೀತಿ history ಅಲ್ಲ
(ಓ ಹಂಗಾಯ್ತಾ)
ನೀನೇನ್ ರುಕ್ಕು ಅಲ್ಲ
ನಾನೇನ್ ಕೃಷ್ಣ ಅಲ್ಲ
Love ಆಗೋಯ್ತೆ ನಿನ್ಮ್ಯಾಲೆ
Love ಆಗೋಯ್ತೆ ನಿನ್ಮ್ಯಾಲೆ

(ವಾರೆ ವಾರೆ ವಾರೆ ವಾರೆ
ರಾಮ ಬಂದ ನೋಡೆ
ವಾರೆ ವಾರೆ ವಾರೆ ವಾರೆ
ಜಿಂಕೆ ತಂದ ನೋಡೆ)

ನಾನು ಬಿಲ್ಲು ಗಿಲ್ಲು ಮುರಿಲೇ ಇಲ್ಲ
Mummy boost-u ಕೊಡ್ಲಿಲ್ಲ
ಅದಿಕೆ ಮುರಿಯಕ್ ಆಗ್ಲಿಲ್ಲ
ನಿನ್ನ ಕಾಡಗ್ ಕರ್ಕಂಡ್ ಹೋಗ್ಲೂ ಇಲ್ಲ
(Dinosaurus ಇತ್ತಲ್ಲ
ಅದಿಕೆ ಕರ್ಕೊಂಡ್ ಹೋಗ್ಲಿಲ್ಲ)
ಜಿಂಕೆ ಬೇಕು ಅಂತ ನೀನು ಕೇಳ್ಲೂ ಇಲ್ಲ
ರಾವಣ ಬಂದು ನಿನ್ನ ಹೊತ್ಕೊಂಡ್ ಹೋಗ್ಲೂ ಇಲ್ಲ
ಕಪಿ ಸೈನ್ಯವ ಕಟ್ಟಿ ಹುಡುಕಾಡ್ಲಿಲ್ಲ
ಲಂಕೆ ಸುಟ್ಟು ರವಣುನ್ ಕೊಲ್ಲೂ ಇಲ್ಲ

(ಅಯ್ಯಯ್ಯೋ ಮುಂದೆ?)

ನೀನೇನ್ ಸೀತೆ ಅಲ್ಲ
ನಾನೇನ್ ರಾಮ ಅಲ್ಲ
Love ಆಗೋಯ್ತೆ ನಿನ್ಮ್ಯಾಲೆ
Love ಆಗೋಯ್ತೆ ನಿನ್ಮ್ಯಾಲೆ



Credits
Writer(s): S A Lokesh Kumar, Prem Jogi
Lyrics powered by www.musixmatch.com

Link