Naanu Hudukuthiruva Haadi

ನಾನು ಹುಡುಕುತಿರುವ ಹಾದಿ
ನಿನ್ನಲ್ಲೇ ಕೊನೆಯಾಗಬಹುದೇ
ಇಲ್ಲೇ ನೆಮ್ಮದಿ ಸಿಗಬಹುದೇನು ಆಸೆಯ ಪಡಬಹುದೇ
ಖುಷಿಯಿಂದ ಹೊಸ ಯೌವನ ಮೂಡಿದೆ ಈಗ
ನೀನಿನ್ನೂ ಸ್ವೀಕರಿಸು ಈ ಹೃದಯ ಕರೆಯ ಬೇಗ

ಸದ್ದೇ ಮಾಡದೆ ದಿನ ಸಾಗೋ ಚಂದ್ರನೇ
ಬಿದ್ದಾ ಹಾಗಿದೆ ಮನದಾ ಅಂಗಳಕೆ
ಸಂಜೆ ವೇಳೆ ಬೀಸೋ ತಂಪಾದ ಗಾಳಿಯು
ಇನ್ನು ಮುಂದೆ ನನ್ನ ಕೆಡಿಸೋದೇ ಚಂದವೂ
ಸಹಕರಿಸು ಸರಿಹೋಗಲು ನಲುಮೆಯ ಸೂರಿನಲಿ
ಅನುಸರಿಸು ಈ ನೋಟವ ಒಲುಮೆಯ ನೆಪದಲ್ಲಿ
ಹೀಗೆ ಅಲೆದಾಡುವ ನನಗೆ
ನಿನ್ನೆದೆಯ ಊರೊಂದು ಸಿಗಬಹುದೇ
ಮನದ ಪುಸ್ತಕ ಬಳಿಬಂದೆ ನೀ ನವಿಲಿನ ಗರಿಯಂತೆ
ಮಾಮೂಲು ದಾರಿಯಲಿ ತಿರುವೊಂದು ನಿನ್ನಿಂದ
ಆಕರಿಸೋ ಕನಸುಗಳೇ ಇನ್ನೆಲ್ಲಿಗೆ ಇಲ್ಲಿಂದ

ಹಾರೋ ಹಕ್ಕಿಯು ರೆಕ್ಕೆಯ ಬಡಿದಂತೆ
ನಿನ್ನ ಸೇರಲು ಕೌತುಕವು ಹೆಚ್ಚಿದೆ
ನೆನ್ನೆ ಮೊನ್ನೆ ಸಂತೆ ಸಹವಾಸ ಏತಕೆ
ಸುರಿವ ಸೋನೆಯಲ್ಲೂ ನಿನ್ನಂದ ಕಂಡಿದೆ
ಸಹಕರಿಸು ಸರಿ ಹೋಗಲು ಸರಿಯಾಗದ ರೀತಿಯಲ್ಲಿ
ಅನುಸರಿಸು ಈ ನೋಟವ ಮಿತಿಮೀರುವ ಜೊತೆಯಲ್ಲಿ
ನಾನು ನಾಚುತಿರೋ ಬಗೆಗೆ
ನಿಂತಲ್ಲೇ ಒಲವೆನ್ನಬಹುದೇ
ಇಲ್ಲೇ ಮಾಹಿತಿ ಸಿಗಬಹುದೆ ತುಂಬಾ ಕಾಯಿಸದೆ
ಮನದಲ್ಲಿ ಅಂಗಡಿಯು ತೆರೆದಿಹುದು ತಂತಾನೇ
ವ್ಯವಹಾರ ಗೊತ್ತಿರದ ವ್ಯಾಪಾರಿಯು ನಾನಾದೆ



Credits
Writer(s): Dolvin Kolalagiri, Keerthan Bhandary
Lyrics powered by www.musixmatch.com

Link