Bit Hogbeda (From "Raambo 2")

ಕೂಗಿ ಕೂಗಿ ಕರೆಯುತ್ತಿರೋ ಕಣ್ಣ ಹನಿಯ ದನಿ ಕೇಳದೆ?
ಮಂಡಿ ಊರಿ ಮರುಗುತ್ತಿರೋ ಮನದ ನೋವು ಮನ ಮುಟ್ಟದೆ?
ಕೈಯ ಮುಗಿವೆ ನಾ ಹೇಗಾದರು
ನೀ ನನ್ನ ಜೊತೆಯೇ ಇರು
ಬಿಟ್ಹೋಗ್ಬೇಡ, ನನ್ನ ಬಿಟ್ಹೋಗ್ಬೇಡ
ಬಿಟ್ಹೋಗ್ಬೇಡ, ನನ್ನ ಬಿಟ್ಹೋಗ್ಬೇಡ

ಕೂಗಿ ಕೂಗಿ ಕರೆಯುತ್ತಿರೋ ಕಣ್ಣ ಹನಿಯ ದನಿ ಕೇಳದೆ?

ಕಾಲ ನಿನ್ನ ಬೇಡುವೆನು, ಸ್ವಲ್ಪ ಹಿಂದೆ ಸರಿದುಬಿಡು
ಸುಂದರ ಕ್ಷಣಗಳನು ಮರಳಿ ಕೊಡು
ಬೇಕಾ ನಿಂಗೆ? ಕೇಳಿ ತಗೋ, ನನ್ನ ಜೀವ ನೀಡುವೆನು
ನಿನ್ನ ವೇಳಾಪಟ್ಟಿಯನು ತಿದ್ದಿ ಇಡು
ಇಷ್ಟೊಂದು ಪ್ರೀತಿ ಕೊಟ್ಟು ಹೋಗದಿರು ನನ್ನ ಬಿಟ್ಟು
ಯಾರು ಇಲ್ಲ ಇಂದು ನನಗೆ ಹಿಂದು ಮುಂದು
ಬಿಟ್ಹೋಗ್ಬೇಡ, ನನ್ನ ಬಿಟ್ಹೋಗ್ಬೇಡ
ಬಿಟ್ಹೋಗ್ಬೇಡ, ನನ್ನ ಬಿಟ್ಹೋಗ್ಬೇಡ

ಓ, ನನ್ನ ದೇವತೆ, ಇರದೆ ನೀ ಜೊತೆ
ನೆರಳು ನನ್ ಜೊತೆ ಬರುತಿಲ್ಲ
ವಿಧಿ, ನಿನ್ನ ಆಟಕೆ ನಾನಾದೆ ಆಟಿಕೆ
ಹೃದಯ ಏತಕೆ ನಿನಗಿಲ್ಲ?
ದೇವರಿಗೂ ನಾನು ಶಾಪ ಹಾಕಿರುವೆ ಅಷ್ಟು ಕೋಪ
ಹೋಗಬೇಡ, ಚಿನ್ನ, ಒಂಟಿ ಮಾಡಿ ನನ್ನ
ಬಿಟ್ಹೋಗ್ಬೇಡ, ನನ್ನ ಬಿಟ್ಹೋಗ್ಬೇಡ
ಬಿಟ್ಹೋಗ್ಬೇಡ, ನನ್ನ ಬಿಟ್ಹೋಗ್ಬೇಡ



Credits
Writer(s): Santosh Naik, S A Lokesh Kumar
Lyrics powered by www.musixmatch.com

Link